June 22, 2021

ಬೆಳ್ ಬೆಳಗ್ಗೆ ಕಛೇರಿಗೆ ಹೋದ ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ಗಾಬರಿಯಾಗಿತ್ತು. ಯಾಕೆ ಅಂತಿರಾ ಈ ಸ್ಟೋರಿ ಓದಿ

ಸವಣೂರು -ಬೆಳ್ ಬೆಳಿಗ್ಗೆ ಕಛೇರಿಗೆ ಬಂದವರಿಗೆ ಆತಂಕ ಎದುರಾಗಿತ್ತು. ವ್ಯಕ್ತಿಯೊಬ್ಬ ಬಾಗಿಲಿಗೆ ಅಡ್ಡವಾಗಿ ಮಲಗಿದ್ದ. ಹತ್ತಿರ ಹೋಗಿ ನೋಡಿ ಕಾರಣ ಕೇಳಿದವರ ಜೊತೆ ಗಲಾಟೆ ಮಾಡಲು ಶುರುವಿಟ್ಟಕೊಂಡ.

ಹೌದು, ಹಾವೇರಿ ಜಿಲ್ಲೆ ಸವಣೂರು ನಿವಾಸಿಯೊಬ್ಬರು ಈ-ಸ್ವತ್ತು ಪಡೆಯಲು ಪುರಸಭೆ ಕಚೇರಿಗೆ ಅಲೆದು-ಅಲೆದು ಸುಸ್ತ್ ಆಗಿ ಪುರಸಭೆಯ ಬಾಗಿಲ ಮುಂದೆ ಅಡ್ಡವಾಗಿ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಪುರಸಭೆಯ ಬಾಗಿಲ ಮುಂದೆ ಅಡ್ಡಮಲಗಿದ ವ್ಯಕ್ತಿಯನ್ನ ಪಾಲಾಕ್ಷಯ್ಯ ಸಾಲಿಮಠ ಎನ್ನಲಾಗಿದೆ.

ಕಳೆದ ಎಂಟು ತಿಂಗಳಿನಿಂದ ಸವಣೂರು ಪುರಸಭೆಯ ಕಚೇರಿಗೆ, ಮನೆಯ ಈ-ಸ್ವತ್ತು ಉತಾರಕ್ಕೆ ಅಲೆದು ಅಲೆದು ಸಾಕಾಗಿ ಹೋಗಿದೆ. ಒಬ್ಬ ಅಧಿಕಾರಿ ಕೇಳಿದರೆ ,ಇ‌ನ್ನೊಬ್ಬ ಅಧಿಕಾರಿಯನ್ನ ಕೇಳಿ ಅಂತಾರೆ.

ಮೂರು ಭಾರಿ ಅರ್ಜಿ ನೀಡಿದರು ಎನು ಪ್ರಯೋಜನವಾಗಿಲ್ಲ. ಅಧಿಕಾರಿಗಳು ಹಣಕ್ಕಾಗಿ ಜನರನ್ನ ಕಾಡಿಸುತ್ತಿದ್ದಾರೆ. ಸವಣೂರು ಪಟ್ಟಣದ ಜನರಿಗೆ ಅಧಿಕಾರಿಗಳಿಗೆ ಸರಿಯಾದ ಕೆಲಸ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು .

____

Share this News
error: Content is protected !!