March 7, 2021

ರಾಶಿ ಮಾಡಲು ಹಾಕಿದ್ದ ಮೆಕ್ಕೆಜೋಳದ ರಾಶಿಗೆ ಬೆಂಕಿ. ಕೀಡಿಗೇಡಿಗಳ ಕೃತ್ಯಕ್ಕೆ ಅನ್ನದಾತರು ಕಂಗಾಲು.

ಬ್ಯಾಡಗಿ – ಅವರೆಲ್ಲಾ ಒಂದು ವರ್ಷ ಕಷ್ಟಪಟ್ಟು ಮಳೆ,ಚಳಿ, ಬಿಸಲು ಎನ್ನದೇ ಜಮೀನಿನಲ್ಲಿ ಕೃಷಿ ಮಾಡಿದ್ದಾರೆ.ಅದರೆ ಮೆಕ್ಕೆಜೋಳದ ತೆನೆಗಳ ರಾಶಿಗೆ ಆಕಸ್ಮಿಕ ಬೆಂಕಿ ಬಿದ್ದು ಮೆಕ್ಕೆಜೋಳದ ರಾಶಿ ಧಗಧಗನೆ ಹೊತ್ತಿ ಉರಿದ‌ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಚಿನ್ನಕಟ್ಟಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ  HAVERI | ನರೇಗಾ ಯೋಜನೆಯಡಿ ರೈತ ಕ್ರಿಯಾಯೋಜನೆ

ಗ್ರಾಮದ ಮೂರು ಜನ ರೈತರು ರಾಶಿ ಮಾಡಲು ಒಂದೇ ಕಣದಲ್ಲಿ ಹಾಕಿದ್ದರು.
ಗಣೇಶಪ್ಪ ಹಳೇಮನಿ, ವಿಜಯಕುಮಾರ ಹಳೇಮನಿ ಮತ್ತು ಪರಶುರಾಮ ಹಳೇಮನಿ ಎಂಬ ರೈತರಿಗೆ ಸೇರಿದ‌ ಮೆಕ್ಕೆಜೋಳದ ತೆನೆಯ ರಾಶಿ ಎನ್ನಲಾಗಿದೆ.ಯಾರು ಕೀಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ.

ಇದನ್ನೂ ಓದಿ  ಓಡಿ ಹೋಗಿ ಮದ್ವೆ ಆಗುತ್ತಿದ್ದ ಪ್ರೇಮಿಗಳಿಗೆ ಆಶೀರ್ವದಿಸಿದ ಎಮ್.ಪಿ.ರೇಣುಕಾಚಾರ್ಯ: ಪೋಷಕರು ಏನಂದ್ರು ಗೊತ್ತಾ...?

18 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ತೆನೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸುಮಾರು ಐದು ಲಕ್ಷಕ್ಕೂ ಅಧಿಕ ಹಾನಿಯಾಗಿದ್ದು, ರೈತರಿಗೆ ಕೈಗೆ ಬಂದ‌ ತುತ್ತು ಬಾಯಿ ಬಾರದಂತೆ ಆಗಿದೆ.

ಇದನ್ನೂ ಓದಿ  ಬಿಪಿಎಲ್ ಪಡಿತರ ಚೀಟಿ ಹಿಂತಿರುಗಿಸಿ, ಇಲ್ಲಾಂದ್ರೆ ಕ್ರಿಮಿನಲ್ ಕೇಸ್.!?

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

______

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!