June 22, 2021

ಮಹಾದೇವ ಕಿತ್ತೂರ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಹಾವೇರಿ: ಹಾವೇರಿಯ ಅಂಚೆ ಇಲಾಖೆಯಲ್ಲಿ ಅಂಚೆ ಜೀವ ವಿಮೆ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಾದೇವ ಕಿತ್ತೂರ ಅವರಿಗೆ ಉತ್ತಮ ಅಭಿವೃದ್ಧಿ ಅಧಿಕಾರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಇತ್ತೀಚೆಗೆ ಬೆಂಗಳೂರಿನ ಮೇಘದೂತ ಆಡಿಟೋರಿಯಮ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 2019-20 ನೇ ಸಾಲಿನ ಅಂಚೆ ಜೀವ ವಿಮೆಯಲ್ಲಿ ಪ್ರಥಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಇವರು 2014 ರಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಈ ಪ್ರಶಸ್ತಿ ಪಡೆದಿದ್ದಾರೆ. ಈ ಹಿಂದೆ ಇವರು ಧಾರವಾಡ, ಗದಗ, ಶಿರಸಿ ಹಾಗೂ ಕಾರವಾರ ಅಂಚೆ ವಿಭಾಗದ ಜೀವ ವಿಮಾ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೀಫ್ ಪೋಸ್ಟ್‍ಮಾಸ್ಟರ್ ಜನರಲ್ ಶ್ರೀಮತಿ ಶಾರದಾ ಸಂಪತ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕೆ.ರವಿಂದ್ರನ್ ಡಿಪಿಎಸ್ (ಎಚ್‍ಕ್ಯೂ), ಶ್ರೀಮತಿ ಶ್ಯೂಲಿ ಬರ್ಮನ್ ಪಿಎಂಜಿ (ಬಿಜಿ), ಎಮ್ ಬಿ ಗಜಬಿಯೆ ಡಿಪಿಎಸ್ (ಎಸ್‍ಕೆ) ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಪ್ರಶಸ್ತಿ ಪಡೆದ ಮಹಾದೇವ ಕಿತ್ತೂರ ಅವರನ್ನು ಹಾವೇರಿ ಅಂಚೆ ಅಧೀಕ್ಷಕರಾದ ರಮೇಶ ಪ್ರಭು ಅಭಿನಂದಿಸಿದ್ದಾರೆ.

_____

Share this News
error: Content is protected !!