June 22, 2021

ಭಂಡ ಅಧಿಕಾರಿಗಳಿಂದ ರೋಸಿ ಹೋದ ಜನ್ರು, ಪುರಸಭೆ ಮುಂದೆ ಬಾಟಲಿ ಇಟಕೊಂಡು ಕೂತ್ರು..

ಹಾನಗಲ್- ಯಾವ‌ ನಲ್ಲಿ ತಿರುಗಿಸಿದರು ಗಲೀಜು ನೀರು, ಸಂಬಂಧಿಸಿದವರಿಗೆ ಎಷ್ಟೇ ಸಲ ಹೇಳಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಕೊನೆಗೆ ತಲೆ ಕೆಟ್ಟ ಜನರು ಬಾಟಲಿಯನ್ನೆ ತಂದು ಪುರಸಭೆ ಮುಂದೆ ಕೂತ್ರು…

ಹೌದು ಕುಡಿಯಲು ಸರಿಯಾದ ನೀರು ಬಿಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆ ಹಾನಗಲ್ನ ಪುರಸಭೆ ಮುಂದೆ ನೀರಿನ ಬಾಟಲಿ ಇಟ್ಟು ಪ್ರತಿಭಟನೆ ಮಾಡಿದ ಘಟನೆ ಪುರಸಭೆಯ ಮುಂದೆ ನಡೆದಿದೆ.

ಕಳೆದ ಕೆಲವು ತಿಂಗಳಿನಿಂದ ಹಾನಗಲ್ ಪಟ್ಟಣದ ಜನರಿಗೆ ಶುದ್ದ ಕುಡಿಯುವ ನೀರನ್ನು ಬಿಡುತ್ತಿಲ್ಲ. ಪಟ್ಟಣದ ಹೊರವಲಯದಲ್ಲಿರುವ ಆನೆ ಕೆರೆಯಿಂದ ನೀರಿನ್ನು ಸಂಸ್ಕರಣೆ ಮಾಡದೆ ಹಾಗೆ ಬಿಡಲಾಗಿತ್ತಿದೆ. 35ಸಾವಿರಕ್ಕೂ ಅಧಿಕ‌ ಜನರು ಪ್ರತಿದಿನ ಅಶುದ್ಧ ನೀರನ್ನು ಸೇವನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಲ್ಲಿಯಲ್ಲಿ ಬಂದ ಕಲುಷಿತ ನೀರನ್ನೇ ಬಾಟಲಿಯಲ್ಲಿ ತಂದು ಅಧಿಕಾರಿಗಳಿಗೆ ತೋರಿಸಿ ಅಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರು ದಿನಗಳ ಹಿಂದೆ ಶುದ್ದ ನೀರು ಕೊಡುವ ವ್ಯವಸ್ಥೆ ಮಾಡುವ ಭರವಸೆಯನ್ನ ಅಧಿಕಾರಿಗಳು ನೀಡಿದ್ದರು. ಅದರೂ ಏನೋ ಪ್ರಯೋಜವಾಗಿಲ್ಲ ಎಂದು ಸ್ಥಳೀಯರು ಈ ವೇಳೆ ಆರೋಪಿಸಿದರು.

 

___

 

Share this News
error: Content is protected !!