June 22, 2021

ಪುಲ್ವಾಮ್ ಹುತಾತ್ಮರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಅಗಡಿ ಗ್ರಾಮದ ಯುವಕರು

ಹಾವೇರಿ- ಹಾವೇರಿ ತಾಲ್ಲೂಕು ಅಗಡಿ ಗ್ರಾಮದಲ್ಲಿ ಪುಲ್ವಾಮ್ ಯೋಧರ ಹುತಾತ್ಮ ದಿನದ ಅಂಗವಾಗಿ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ರಾಜ್ಯಮಟ್ಟದ ಮುಕ್ತ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು. ಯೋಗ ಕಾರ್ಯಕ್ರಮದಲ್ಲಿ ಅಗಡಿ ಗ್ರಾಮದ ಯುವಕರು ಸಾರ್ವಜನಿಕರು ಸೇರಿದಂತೆ ಬೇರೆ ಜಿಲ್ಲೆಯ ಯುವಕರು ‌ಭಾಗವಹಿಸಿದ್ದರು.

ಮುಖ್ಯ ತರಬೇತಿದಾರರು ಗಣೇಶ್ ಹಿಂಡಿ ಹಾಗೂ ಅಚೀವರ್ಸ್ ಆರ್ಮಿ ಕೋಚಿಂಗ್ ಅಕಾಡೆಮಿ ತರಬೇತುದಾರರಾದ ಇಮ್ತಿಯಾಜ್ ಹಾವನೂರ್ ಹಾಗೂ ಸುಭಾಷ್ ಚಂದ್ರ ಪಟ್ಟಣಶೆಟ್ಟಿ (ಮಾಜಿ ಯೋಧರು ) ಇವರು ಯೋಗ ಶಿಬಿರ ಚಾಲನೆ ನೀಡಿ ಯುವಕರಿಗೆ ಯೋಗಾ ತರಬೇತಿ ಹಾಗೂ ಅನುಕೂಲಗಳನ್ನ ತಿಳಿಸಿದರು.

ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದ ಬಿ.ಸಿ.ಬಹದ್ದೂರ್ ದೇಸಾಯಿಯವರು ಪುಲ್ವಾಮ್ ಯೋಧರ ತ್ಯಾಗವನ್ನು ನಾವು ಎಂದಿಗೂ ಮರೆಯಬಾರದು, ಯೋಧರು ನಮಗಾಗಿ ತಮ್ಮ ಪ್ರಾಣವನ್ನೆ ಬಲಿದಾನ ಮಾಡಿದರು ಎಂದು ಸ್ಮರಿಸಿದರು.

ಬೆಳಿಗ್ಗೆ 6.00 ಗಂಟೆಗೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇದೇ ಸಂಧರ್ಭದಲ್ಲಿ ಪುಲ್ವಾಮ್ ದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಎರಡು‌ ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸುವ ಮೂಲಕ ಗೌರವ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮ ದಲ್ಲಿ ಗ್ರಾಮದ ಹಿರಿಯರಾದ ಲವಣ್ಣ ಬಹದ್ದೂರ್ ದೇಸಾಯಿ, ಬಿ.ಸಿ.ಬಹದ್ದೂರ್ ದೇಸಾಯಿ, ಚಿದಂಬರ ಲಕ್ಷಣ ಕುಲಕರ್ಣಿ, ಹಾಗೂ ಯೋಗ ತರಬೇತಿದಾರರಾದ ಗಣೇಶ ಹಿಂಡಿ, ಅಚೀವರ್ಸ್ ಆರ್ಮಿ ಕೋಚಿಂಗ್ ಆಕಾಡೆಮಿಯ ಕಿರಣ ಬಸೇಗಣ್ಣಿ, ಹೇಮಂತ ಬಸೇಗಣ್ಣಿ. ಈರಣ್ಣ ಮಡಿವಾಳ, ಇಮ್ತಿಯಾಜ್ ಹಾವನೂರ, ಸುಭಾಷ್ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಮಣ್ಣೂರ, ನಜೀರ ಅಹ್ಮದ್ ಹಾವನೂರ, ಸೇರಿದಂತೆ ಅಕಾಡೆಮಿಯ ಸದಸ್ಯರು ಊರಿನ ಯುವಕರು ಗ್ರಾಮಸ್ಥರು ಭಾಗವಹಿಸಿದ್ದರು.

Share this News
error: Content is protected !!