ಬಿಸಿ ಸುದ್ದಿ
October 18, 2021

Hindu Temple Issue| ಧಾರ್ಮಿಕ ಕಟ್ಟಡಗಳ ತೆರವು ವಿವಾದ; ಹಾವೇರಿ ಜಿಲ್ಲೆಯಲ್ಲಿ ತೆರವಿಗೆ ಪಟ್ಟಿ ಮಾಡಲಾಗಿರುವ ಧಾರ್ಮಿಕ‌ ಕಟ್ಟಡಗಳಾವು.!?

ಹಾವೇರಿ (ಸುದ್ದಿತರಂಗ ಸೆ,14)- ರಾಜ್ಯಾದ್ಯಂತ ಹಿಂದೂ ದೇವಾಲಯಗಳ ತೆರವು ವಿವಾದ ತೀವ್ರ ಚರ್ಚೆಯಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಕೂಡ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ಮಾಡಲಾಗಿದೆ.

ಜಿಲ್ಲೆಯಲ್ಲಿ 2009ರ ಸೆಪ್ಟೆಂಬರ್ 29 ಕ್ಕಿಂತ ಮೊದಲು ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಒಟ್ಟು 41 ಸಣ್ಣಪುಟ್ಟ ಧಾರ್ಮಿಕ ಕಟ್ಟಡಗಳು ನಿರ್ಮಾಣ ಆಗಿವೆ. ಸೆಪ್ಟಂಬರ್ 29, 2009ರ ನಂತರ ಒಟ್ಟು 2 ಅನಧೀಕೃತ ಧಾರ್ಮಿಕ ಕಟ್ಟಡಗಳು ನಿರ್ಮಾಣ ಆಗಿವೆ.

ಅದರಲ್ಲಿ ಕೆಲವೊಂದು ಸಾರ್ವಜನಿಕರಿಗೆ ತೊಂದರೆ ಇಲ್ಲವೆಂದು ಕಂಡುಬಂದಿದ್ದರಿಂದ ರೆಗ್ಯುಲರೈಸ್ ಆಗಿವೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 3 ಧಾರ್ಮಿಕ ಕಟ್ಟಡಗಳನ್ನು ಮಾತ್ರ ತೆರವು ಮಾಡಲಾಗಿದೆ. ಅವು ಕೂಡ ದೊಡ್ಡ ಪ್ರಮಾಣದ್ದವುಗಳಲ್ಲ.

ದೇವರ ಕಲ್ಲು, ದೇವರ ಕಟ್ಟೆ, ದರ್ಗಾ ಕಟ್ಟೆ ತೆರವು ಮಾಡಲಾಗಿದೆ. ಇನ್ನೂ 12 ಸಣ್ಣಪುಟ್ಟ ಧಾರ್ಮಿಕ ಕಟ್ಟಡಗಳು ತೆರವಿಗೆ ಬಾಕಿ ಉಳಿದಿವೆ. ಅವುಗಳನ್ನು ತೆರವು ಮಾಡಬೇಕೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಸ್ಥಳೀಯ ಸಂಸ್ಥೆಗಳು ತೀರ್ಮಾನ ಮಾಡಬೇಕಿದೆ. ಉಳಿದಂತೆ ಒಂದು ಪ್ರಕರಣ ಹೈಕೋರ್ಟ್ ನಲ್ಲಿದೆ. ಹೀಗಾಗಿ ಜಿಲ್ಲೆಯಲ್ಲಿ ಧಾರ್ಮಿಕ ಕಟ್ಟಡಗಳದ್ದು ದೊಡ್ಡ ಸಮಸ್ಯೆ ಏನಿಲ್ಲ ಅಂತಾ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿದ್ದಾರೆ.

___

Share this News
error: Content is protected !!