June 22, 2021

ಇಂದು ಬೆಣ್ಣೆನಗರಿಯಲ್ಲಿ ಪೊಗರು ಚಿತ್ರದ ಆಡಿಯೋ ಬಿಡುಗಡೆ. ಮಾಜಿ ‌ಸಿ.ಎಮ್.ಸಿದ್ದರಾಮಯ್ಯ ಭಾಗಿ

ದಾವಣಗೆರೆ – ನಿರ್ದೇಶಕ ನಂದಕಿಶೋರ್ ನಿರ್ದೇಶನದ ಪೊಗರು ಚಲನಚಿತ್ರದ ಸಖಲ್ ಆಡಿಯೋ ಬೆಣ್ಣೆನಗರಿ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ವೇದಿಕೆಯಲ್ಲಿ ನಡೆಯಲಿದೆ. ಪೊಗರು ಚಲನಚಿತ್ರದ ಆಡಿಯೋ ಲಾಂಚ್ ಮಾಡಲಿದೆ.

ನಟ ಧೃವ ಸರ್ಜಾ ನಟಿ ರಶ್ಮಿಕಾ ಮಂದಣ್ಣ ತಾರಾಗಣದ ಬಿಗ್ ಬಜೆಟ್, ರೊಮ್ಯಾಂಟಿಕ್ ಚಲನಚಿತ್ರವಾಗಿದೆ.ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 15 ಸಾವಿರ ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಆಡಿಯೋ ರಿಲೀಸ್ ಮಾಜಿ ಸಿಎಂ ಸಿದ್ದರಾಮಯ್ಯ,ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಸೇರಿ ಜನಪ್ರತಿನಿಧಿಗಳು ಗಣ್ಯರು ಭಾಗಿವಹಿಸಲಿದ್ದಾರೆ. ಚಿತ್ರದ ನಾಯಕ ಹಾಗೂ ನಟಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

 

___

Share this News
error: Content is protected !!