ಬಿಸಿ ಸುದ್ದಿ
October 20, 2021

ವಿನೂತನ‌ವಾಗಿ ಮಗಳ ಹುಟ್ಟುಹಬ್ಬ ಆಚರಿಸಿದ ಸೈನಿಕ; ಗ್ರಾಮದಲ್ಲಿ ರಕ್ತದಾನ ಶಿಬಿರ ಮಾಡಿ ತಂದೆ-ತಾಯಿ ಪುಣ್ಯ ಸ್ಮರಣೆ ಹಾಗೂ ಮಗಳ ಹುಟ್ಟುಹಬ್ಬ ಆಚರಣೆ.!

ಹಾವೇರಿ‌ (ಸುದ್ದಿತರಂಗ ಸೆ,16)- ದೇಶ ಕಾಯುವ ಸೈನಿಕರೊಬ್ಬರು ತಮ್ಮ ಮಗಳ ಹುಟ್ಟು ಹಬ್ಬವನ್ನು ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು. ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಕುಣಿಮಳ್ಳಿಹಳ್ಳಿ ಗ್ರಾಮದಲ್ಲಿ ಭಾರತೀಯ ಸೇನಾ ಯೋಧರ ಅಭಿಮಾನಿ ಬಳಗದ ವತಿಯಿಂದ ಸೈನಿಕ ಮಂಜುನಾಥ ಮುಗದೂರ ತಮ್ಮ ಮಗಳ ಹುಟ್ಟು ಹಬ್ಬ, ತಂದೆ- ತಾಯಿ ಪುಣ್ಯಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಆಚರಣೆ ಮಾಡಿದರು.

ಗ್ರಾಮದ 20 ಕ್ಕೂ ಅಧಿಕ ಯುವಕರು ರಕ್ತದಾನ ಮಾಡುವ ಮೂಲಕ ರಕ್ತದಾನಿಗಳಾದರು. ದೇಶ ಕಾಯುವ ಸೈನಿಕರಾದ ಮಂಜುನಾಥ ಮುಗದೂರ ಅವರು ಈ ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರು ಹಾಗೂ ಅದೇ ಗ್ರಾಮದ ಸೈನಿಕರಾದ ರಮೇಶ್ ಹುಲ್ಲೂರ್ ರವರು ಸಂತಸ ವ್ಯಕ್ತಪಡಿಸಿದರು. ಸೈನಿಕರಾದ ಮಂಜುನಾಥ ಮುಗದೂರ ರವರು ಮಾತನಾಡಿ ಕೊರೋನಾ ಸಮಯದಲ್ಲಿ ರಕ್ತದ ಕೊರತೆ ಇರುವುದರಿಂದ ಈ ವಿಶಿಷ್ಟ ಕಾರ್ಯಕ್ರಮ ಮಾಡಲಾಗಿದೆ. ಎಲ್ಲರೂ ರಕ್ತದಾನ ಮಾಡಿ ಯಾವುದೇ ಸಮಸ್ಯೆ ಆಗುದಿಲ್ಲ. ನನ್ನ ಮಗಳ , ಹಾಗೂ ತಂದೆತಾಯಿಗಳ ಪುಣ್ಯ ಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ ಮಾಡಲಾಗಿದೆ.ಯುವಕರು ರಕ್ತದಾನ ಮಾಡಿದ್ದಾರೆ. ತುಂಬಾ ಸಂತೋಷವಾಗಿದೆ…

ಇದೇ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ಸಿಬ್ಬಂದಿ ವರ್ಗದವರಾದ ಡಾಕ್ಟರ್ ಬಸವರಾಜ ತಳವಾರ, ಬಸವರಾಜ ಕಮತದ, ಮಧು ಎಮ್, ಮಹಾಂತೇಶ ಹೊಳೆಮ್ಮನವರ, ಸಂತೋಷ ಕಲಾಲ, ಪುಷ್ಪ ಸರ್ಜಾ, ಪೂರ್ಣಿಮಾ ಬೆಟಗೇರಿ ಎಲ್ಲ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಪರಶುರಾಮ್ ಜುಂಜಣ್ಣನವರ, ಶಿಕ್ಷಕರಾದ ಎನ್.ವಿ. ಕಲಕೋಟಿ ದಂಪತಿಗಳು ಹಾಗೂ ಊರ ಹಿರಿಯರು ಯುವಕರು ಭಾಗವಹಿಸಿದ್ದರು.

Share this News
error: Content is protected !!