ಬಿಸಿ ಸುದ್ದಿ
October 20, 2021

ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ; ಹಸುಗೂಸುಗಳನ್ನು ಎತ್ತಿಕೊಂಡು ಹೊರಗ ಓಡಿದ ಬಾಣಂತಿಯರು.!

 

ಹಾವೇರಿ (ಸುದ್ದಿತರಂಗ ಸೆ,21)- ವಿದ್ಯುತ್ ಸರಬರಾಜು ಮಾಡುವ ಮೇನ್ ಬೋರ್ಡ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡ ಘಟನೆ ಹಾವೇರಿ ನಗರದ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ವಿದ್ಯುತ್ ಸರಬರಾಜು ಮಾಡುವ ಮೇನ್ ಬೋರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಹೊಗೆಗೆ ಗಾಬರಿಯಿಂದ ರೋಗಿಗಳು ಹಾಗೂ ಅವರ ಸಂಬಂಧಿಕರು ಹೊರಗೋಡಿ ಬಂದಿದ್ದಾರೆ. ಆತಂಕದಿಂದ ಬಾಣಂತಿ ಮಹಿಳೆಯರು ಹಸುಗೂಸುಗಳನ್ನು ಎತ್ತಿಕೊಂಡು ಹೊರಗೋಡಿ ಬಂದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಯ ಮೇನ್ ಬಿಲ್ಡಿಂಗ್ ಗೆ ಬಾಣಂತಿಯರನ್ನು ಮತ್ತು ಮಕ್ಕಳನ್ನು ಸಿಬ್ಬಂದಿಗಳು ಶಿಫ್ಟ್ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಯಾವುದೇ ತೊಂದರೆ ಆಗಿಲ್ಲ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ‌.

______

Share this News
error: Content is protected !!