ಬಿಸಿ ಸುದ್ದಿ
October 20, 2021

ಕೊಬ್ಬರಿ ಹೋರಿಯ ಬರ್ತ್ ಡೇ; ಎರಡು ಕೆಜಿ ಕೇಕ್ ಕತ್ತರಿಸಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು.!

ಹಾನಗಲ್ (ಸುದ್ದಿತರಂಗ ಸೆ,23)- ಸಾಮಾನ್ಯವಾಗಿ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳ ಹಾಗೂ ಕುಟುಂಬ ಸದಸ್ಯರ ಹುಟ್ಟುಹಬ್ಬವನ್ನು ಆಚರಣೆ ಮಾಡುವುದು ಕಾಮನ್.‌ ಆದರೆ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಹರವಿ ಗ್ರಾಮದಲ್ಲಿ ರೈತರೊಬ್ಬರು ತಮ್ಮ ಹೋರಿಯ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಿದ್ದಾರೆ. ಗ್ರಾಮದ ರೈತ ವೀರಪ್ಪ ಅಂಗಡಿ ಎಂಬುವರ ಮನೆಯಲ್ಲಿ ಹೋರಿಗೆ ಎರಡನೇಯ ವರ್ಷದ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ರೈತ ಕುಟುಂಬ ಆಚರಿಸಿದೆ.


ಹೋರಿಯ ಎರಡನೇಯ ವರ್ಷದ ಬರ್ತಡೇ ಆಗಿದ್ದರಿಂದ ಎರಡು ಕೆಜಿಯ ಕೇಕ್ ಮಾಡಿಸಲಾಗಿತ್ತು.‌ ಕೇಕ್ ನಲ್ಲಿ ಹೋರಿಯ ಪೋಟೋವನ್ನು ಸಹ ಹಾಕಿಸಲಾಗಿತ್ತು. ಹೋರಿಯನ್ನು ಸುಂದರವಾಗಿ ಬರ್ತ್ ಡೇ ಬಾಯ್ ತರಹ ಶೃಂಗಾರ ಮಾಡಿದ್ದರು. ಗ್ರಾಮದ ಮಹಿಳೆಯರು ಸೇರಿದಂತೆ ರೈತ ವೀರಪ್ಪ ಕುಟುಂಬದ ಮಹಿಳೆಯರು ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಹೋರಿಗೆ ಆರತಿ ಬೆಳಗಿದರು. ಹುಟ್ಟುಹಬ್ಬದ ಸಮಾರಂಭದ ನಿಮಿತ್ತ ಹೋರಿಯ ಅಸಂಖ್ಯೆ ಅಭಿಮಾನಿಗಳು ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದರು. ಬಂದ ಅಭಿಮಾನಿಗಳು ಹೋರಿಯ ಜೊತೆಗೆ ಪೋಟೋ ತೆಗಿಸಿಕೊಳ್ಳುವುದು ಹಾಗೂ ಸೆಲ್ಪಿ ಕ್ಲಿಕ್ ಮಾಡಿಕೊಂಡರು.

ಈ ಹೋರಿ ರವಿ ಸೂರ್ಯ ಎಂಬ ಹೆಸರಿನಿಂದ ಕೊಬ್ಬರಿ ಹೋರಿ ಸ್ಪರ್ಧೆ ಯ ಆಖಾಡದಲ್ಲಿ ಫೇಮಸ್ ಆಗಿದೆ. ಬರೋಬ್ಬರಿ ಎರಡು ಕೆ.ಜಿ ತೂಕದ ಕೇಕ್ ಕತ್ತರಿಸಿ, ಹೋರಿಗೆ ತಿನ್ನಿಸಿ ಜೊತೆಗೆ ಗ್ರಾಮದ ಜನರಿಗೆ ಹಂಚಲಾಯಿತು. ಹೆಮ್ಮೆಯ ಮನೆ ಮಗನಂತಿರುವ ಸೂರ್ಯ ಎಂಬ ಹೆಸರಿನಿಂದ ಫೇಮಸ್ ಆದ ಹೋರಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ರೈತ ಕುಟುಂಬ ಹಾಗೂ ಹೋರಿ ಅಸಂಖ್ಯಾತ ಅಭಿಮಾನಿಗಳು ಸಂತೋಷದಿಂದ ಭಾಗಿಯಾಗಿ ಸಂಭ್ರಮಿಸಿದರು.

 

___

Share this News
error: Content is protected !!