ಬಿಸಿ ಸುದ್ದಿ
October 18, 2021

Crime News| ಮದುವೆಯಾಗಿ 15 ವರ್ಷವಾದರೂ ಪರಪುರುಷರ ಸಂಗ ಬಿಡದ ಹೆಂಡತಿ; ಸ್ವಂತ ಅಕ್ಕಳ ಹತ್ಯೆಗೆ ಬಾವನೊಂದಿಗೆ ಸೇರಿ ಮುಹೂರ್ತ ಇಟ್ಟ ತಮ್ಮ.!


ಹಾವೇರಿ – ಪತ್ನಿಯ ಅನೈತಿಕ ಸಂಬಂಧದಿಂದ ರೋಸಿ ಹೋದ ಪತಿ, ಆಕೆಯ ತಮ್ಮನ ಜೊತೆ ಸೇರಿ ಮಳೆಯನ್ನು ಹತ್ಯೆ ಮಾಡಿ ಸುಟ್ಟು ಹಾಕಿದ ಘಟನೆ ಹಾವೇರಿ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು 32 ವರ್ಷದ ಶಕುಂತಲಾ ಉಪ್ಪಾರ್ ಎಂದು ಗುರುತಿಸಲಾಗಿದೆ.

ಮೃತ ಶಕುಂತಲಾ ಹಾವೇರಿ‌ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮದವಳು. ಕಳೆದ 15 ವರ್ಷಗಳ ಹಿಂದೆ ಶಕುಂತಲಾಳನ್ನು ಹಾವೇರಿ ತಾಲೂಕಿನ ಕೆರೆಕೊಪ್ಪ ಗ್ರಾಮದ ಹನುಮಂತಪ್ಪ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಶಕುಂತಲಾ ಮತ್ತು ಹನುಮಂತಪ್ಪ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಮದುವೆ ನಂತರದ ಕೆಲವು ವರ್ಷಗಳಿಂದ ಶಕುಂತಲಾ ಪರಪುರುಷರ ಸಂಗ ಬೆಳೆಸಿದ್ದಳಂತೆ.

ಕೆಲವು ವರ್ಷಗಳ ಹಿಂದೆ ಪರಪುರುಷನ ಜೊತೆ ಮನೆಬಿಟ್ಟು ಕೂಡ ಹೋಗಿದ್ದಳು. ಆಗ ಶಕುಂತಲಾಳ ತಂದೆ ತಾಯಿ ಪೊಲೀಸರ ನೆರವಿನಿಂದ ಆಕೆಯನ್ನು ಪತ್ತೆ ಮಾಡಿ ಬುದ್ಧಿವಾದ ಹೇಳಿ ಪತಿಯ ಮನೆ ಸೇರಿಸಿದರು. ಆದರೆ ಶಕುಂತಲಾ ಮಾತ್ರ ಪರಪುರುಷರ ಸಂಗವನ್ನು ಬಿಡಲೇ ಇಲ್ವಂತೆ. ಹೀಗಾಗಿ ಶಕುಂತಲಾಳ ಪತಿ ಹನುಮಂತಪ್ಪ ಆಕೆಯ ತಮ್ಮ ಬಸವರಾಜ ಜೊತೆ ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿ ಸುಟ್ಟು ಹಾಕಿದ್ದಾರೆ.

ಇಬ್ಬರು ಆರೋಪಿಗಳನ್ನು ಗುತ್ತಲ ಪೊಲೀಸರು ಬಂಧಿಸಿ ತನಿಖೆಯನ್ನು ಕೈಗೊಂಡಿದ್ದಾರೆ. ಸ್ಥಳಕ್ಕೆ ಹಾವೇರಿ ಎಸ್ಪಿ ಹನುಮಂತರಾಯ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಗುತ್ತಲ‌ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

______

Share this News
error: Content is protected !!