ಹಾವೇರಿ – ಇತ್ತೀಚಿನ ದಿನಗಳಲ್ಲಿ ಹುಡುಗ-ಹುಡುಗಿ ಲವ್ ಮಾಡುತ್ತಾರೆ. ಮದುವೆ ಆಗೋ ಸಮಯದಲ್ಲಿ ಮನೆಯಲ್ಲಿ ಹೇಳೋಕೆ ಆಗದೆ, ಸಂಬಂಧಿಗಳ ಹತ್ತಿರ ಹೇಳೋಕೆ ಆಗದೆ ಮನೆಯಿಂದ ಓಡಿ ಹೋಗುತ್ತಾರೆ. ಆದರೆ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಬಿದರಕೊಪ್ಪದ ಗ್ರಾಮದ ನಿಂಗಪ್ಪ ಕಾಳೇರ್ ಎಂಬುವವರು ಕಳೆದ ಎರಡು ದಶಕಗಳಿಂದ ಅಂತಹ ಪ್ರೇಮಿಗಳನ್ನು ಒಂದು ಮಾಡುವ ಕೆಲಸ ಮಾಡುತ್ತಿದ್ದಾರೆ.
ಮೊದಲ ಮೊದಲು ಸಾಮೂಹಿಕವಾಗಿ ವಿವಾಹಗಳನ್ನ ಆಯೋಜನೆ ಮಾಡಿ ಬಡವರಿಗೆ ದಾರಿದೀಪವಾಗಿದ್ದರು.
ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಪ್ರೇಮ ವಿವಾಹ ಮಾಡಿದ್ದಾರೆ. ಯಾರಿಗಾದರೂ ಲವ್ ಪ್ರಾಬ್ಲಮ್ ಆದರೂ ಇವರನ್ನು ಹುಡುಕಿಕೊಂಡು ಬರುತ್ತಾರೆ. ಬಂದವರು ಬಡವರು ಶ್ರೀಮಂತರು, ಆ ಜಾತಿ ಈ ಜಾತಿ ಎನ್ನದೆ ಅವರ ಮದುವೆ ಮಾಡಿಸುತ್ತಾರೆ. ಅದರಲ್ಲೂ ಇವರು ಇಂಟರ್ ಕ್ಯಾಸ್ಟ್ ಮ್ಯಾರೇಜ್ ಮಾಡಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. 250ಕ್ಕೂ ಹೆಚ್ಚ ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ್ದಾರೆ. ಮದುವೆ ಮಾಡಿ ಹಾರ ಬದಲಾಯಿಸಿ ರಿಜಿಸ್ಟರ್ಗೆ ಸಹಿ ಹಾಕಿ ಹೋಗುವುದು ಅಷ್ಟೇ ಅಲ್ಲ ಇವರ ಕೆಲಸ.
ಮದುವೆ ಆದ ನವ ದಂಪತಿಗಳ ಜೀವನಕ್ಕೆ ಏನೂ ಬೇಕು ಎಲ್ಲ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುತ್ತಾರೆ. ಮಂದಿನ ಎರಡು ವರ್ಷ ಅವರಿಗೆ ಏನೇ ಸಮಸ್ಯೆಗಳು ಬಂದರು ಇವರೇ ಮುಂದೆ ನಿಂತು ನಿಭಾಯಿಸುತ್ತಾರೆ. ಕೇವಲ ಪ್ರೇಮಿಗಳು ಅಲ್ಲದೆ ಅದೇಷ್ಟೋ ಕುಟುಂಬಗಳ ಜಗಳ ಬಗೆಹರಿಸಿ ಗಂಡ-ಹೆಂಡತಿಯರನ್ನು ಒಂದು ಮಾಡುತ್ತಾರೆ.
ನಿಂಗಪ್ಪ ಓದಿದ್ದು ಕಡಿಮೆ. ಆದರೂ ಎಲ್ಲ ಕಾನೂನುಗಳು ಜ್ಞಾನ ಪಡೆದುಕೊಂಡು ಮದುವೆ ಮಾಡಿಸುತ್ತಿದ್ದಾರೆ. ಇವರ ಸಮಾಜ ಸೇವೆ ಗುರುತಿಸಿ ಅದೆಷ್ಟೋ ಪ್ರಶಸ್ತಿಗಳನ್ನ ಸಂಘ- ಸಂಸ್ಥೆಗಳು ನೀಡಿವೆ. ಮೈಸೂರು ವಿಶ್ವವಿದ್ಯಾನಿಲಯಿಂದ ಡಾಕ್ಟರೇಟ್,ಡಾ: ಅಂಬೇಡ್ಕರ್ ಪೇಲೋಶಿಪ್ ನ್ಯಾಷನಲ್ ಅವಾರ್ಡ್, ರಾಜೀವ್ ಗಾಂದಿ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ, ದಲಿತ ಶ್ರೀ, ರಾಜೋತ್ಸವ ರತ್ನ,ಕರ್ನಾಟಕ ಭೂಷಣ,ಕರ್ನಾಟಕ ಚೇತನ ಪ್ರಶಸ್ತಿ ಸೇರಿದಂತೆ ಇನ್ನೂ ಹತ್ತು ಹಲವು ಪ್ರಶಸ್ತಿಗಳು ಇವರನ್ನರಿಸಿ ಬಂದಿವೆ. ನಿಂಗಪ್ಪ ಕಾಳೇರ ಪ್ರೇಮಿಗಳು ಪಾಲಿನ ದೇವರಾಗಿದ್ದಾರೆ.
More Stories
ಚಿತ್ರಕಲೆ ಒಂದು ವಿಶ್ವ ಭಾಷೆಯಾಗಿದೆ- ವೀರೇಶ ಹನಗೋಡಿಮಠ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಹಾವೇರಿ ಸೈಕ್ಲಿಂಗ್ ಕ್ಲಬ್ ವತಿಯಿಂದ ವಿಶೇಷವಾಗಿ ಆಚರಣೆ
ಭಗವಂತನನ್ನು ಸಾಕ್ಷತ್ಕಾರ ಮಾಡಿಕೊಳ್ಳವ ಸಾಧನವೇ ಲಿಂಗದೀಕ್ಷೆ – ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ