ಬಿಸಿ ಸುದ್ದಿ
October 18, 2021

ನಾಳೆ ಭಾರತ ಬಂದ್| ಗುಲಾಬಿ ಹೂವು ನೀಡಿ ಭಾರತ್ ಬಂದ್ ಗೆ ಬೆಂಬಲ ನೀಡುವಂತೆ ರೈತ ಸಂಘಟನೆಯಿಂದ ಮನವಿ.!

ಹಾವೇರಿ (ಸುದ್ದಿತರಂಗ ಸೆ,26)- ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನು ಖಂಡಿಸಿ ನಾಳೆ ವಿವಿಧ ರೈತ ಸಂಘಟನೆಗಳು ಸೇರಿದಂತೆ ಕಾರ್ಮಿಕ ಸಂಘಟನೆಗಳು ಭಾರತ್ ಬಂಧ್ ಗೆ ಕರೆ ನೀಡಿವೆ. ಇವತ್ತು ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ರೈತ ಸಂಘಟನೆಯ ಕಾರ್ಯಕರ್ತರು ಸಭೆ ನಡೆಸಿದ್ದು, ಕೋಡಿಹಳ್ಳಿ ಚಂದ್ರಶೇಖರ ಬಣದ ರೈತಸಂಘದ ನೇತೃತ್ವದಲ್ಲಿ ನಾಳೆ ಭಾರತ್ ಬಂದ್ ನಡೆಯಲಿದೆ.

ಬಂದ್ ಹಿನ್ನೆಲೆಯಲ್ಲಿ ರೈತ ಸಂಘಟನೆಯ ಕಾರ್ಯಕರ್ತರು ರಾಣೇಬೆನ್ನೂರು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಅಂಗಡಿಯ ಮಾಲೀಕರಿಗೆ ಗುಲಾಬಿ ಹೂವು ನೀಡಿ ಭಾರತ್ ಬಂದ್ ಬೆಂಬಲಿಸುವಂತೆ ಮನವಿ ಮಾಡಿಕೊಂಡರು. ಅಲ್ಲದೆ ನಾಳೆ ಅಖಂಡ ಕರ್ನಾಟಕ ರೈತ ಸಂಘದಿಂದ ಬಂಕಾಪುರ ಟೋಲ್ ಗೇಟ್ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಬಂದ್ ಆಚರಿಸಲು ನಿರ್ಧಾರ ಮಾಡಿದ್ದಾರೆ.

ಸಾರಿಗೆ ನೌಕರರು ಹಾಗೂ ಹೊಟೇಲ್ ಮಾಲೀಕರು ಸದ್ಯ ಭಾರತ್ ಬಂದ್ ಗೆ ನೈತಿಕ ಬೆಂಬಲ ನೀಡಿದ್ದಾರೆ.

_____

Share this News
error: Content is protected !!