ಬಿಸಿ ಸುದ್ದಿ
October 18, 2021

ಬಸ್ ನಲ್ಲಿ ಪ್ರಯಾಣಿಸುವಾಗ ನಿಮಗೆ ನಿದ್ದೆ ಮಾಡುವ ಅಭ್ಯಾಸವಿದ್ದರೆ ಈ ಸುದ್ದಿ ನೋಡಿ.!

ಹಾವೇರಿ (ಸುದ್ದಿತರಂಗ ಸೆ,26)- ನೀವು ಬಸ್ ನಲ್ಲಿ ಪ್ರಯಾಣ ಮಾಡುವಾಗ ಹುಷಾರಾಗಿರಬೇಕು. ಹೀಗೆ ಬಸ್ ನಲ್ಲಿ ಪ್ರಯಾಣಿಸುವಾಗ ನಿದ್ದೆಗೆ ಜಾರಿ ಕಿಟಕಿಯಲ್ಲಿ ಕೈ ಇಟ್ಟು ಕುಳಿತವನ ಒಂದು ಕೈ ಕಟ್ ಆದ ಘಟನೆ ಅಂಕೋಲಾದಿಂದ ಶಿರಸಿಗೆ ಬರುತ್ತಿದ್ದ ವೇಳೆ ನಡೆದಿದೆ. ಹಿರೇಕೆರೂರು ಮೂಲದ 28 ವರ್ಷದ ನದೀಮ್ ತಾವರಗಿ ಕೈ ಕಳೆದುಕೊಂಡ ದುರ್ದೈವಿ.


ತರಕಾರಿ ವ್ಯಾಪರಿಯಾಗಿದ್ದ ನದೀಮ್ ಬಸ್ ನಲ್ಲಿ ಅಂಕೋಲಾದಿಂದ ಬರುತ್ತಿದ್ದ ವೇಳೆ ಕೈ ಕಟ್ ಆಗಿದೆ. ಅಂಕೋಲಾದಿಂದ ಶಿರಸಿಗೆ ರಾತ್ರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುಳಿತ ಸೀಟಿನಲ್ಲಿಯೇ‌ ನಿದ್ರೆಗೆ ಜಾರಿದ್ದಾನೆ. ನಿದ್ರೆ ಮಂಪರಿನಲ್ಲಿ ಕಿಟಕಿಯಿಂದ ಕೈ ಹೊರ ಚಾಚಿದೆ. ಎದುರಿನಿಂದ ವೇಗವಾಗಿ ಚಲಿಸುತ್ತಿದ್ದ ಲಾರಿ ಕೈಗೆ ತಾಗಿ, ಲಾರಿ ವೇಗಕ್ಕೆ ಕೈ ಕಿತ್ತುಕೊಂಡೇ ಹೋಗಿದೆ.

ಹೆಚ್ಚಿನ ಚಿಕಿತ್ಸೆಗೆ‌ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತಂತೆ ಲಾರಿ ಚಾಲಕ ವಿರುದ್ಧ ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

___

Share this News
error: Content is protected !!