ಬಿಸಿ ಸುದ್ದಿ
October 18, 2021

Hindu mahasabha Ganesh| ಸಿ.ಎಂ ಬಸವರಾಜ್ ಬೊಮ್ಮಾಯಿಯವರ ಕ್ಷೇತ್ರದಲ್ಲಿ ಭರ್ಜರಿಯಾಗಿ ನಡೆದ ಗಣೇಶೋತ್ಸವ ವಿಸರ್ಜನೆ ಮೆರವಣಿಗೆ.!

ಬಂಕಾಪುರ (ಸುದ್ದಿತರಂಗ ಅ,01) – ಗಣೇಶೋತ್ಸವ ಆಚರಣೆಗೆ ಸರಕಾರ ಹಲವು ರೀತಿಯ ನಿರ್ಬಂಧಗಳನ್ನು ಹಾಕಿತ್ತು. ಗಣೇಶೋತ್ಸವ ಆಚರಣೆ ಬಗ್ಗೆ ದೊಡ್ಡಮಟ್ಟದ ಚರ್ಚೆಗಳು ಆಗಿದ್ದವು. ಆದರೆ ಇವೆಲ್ಲವುಗಳ ಮದ್ಯ ಸಿಎಂ ತವರು ಕ್ಷೇತ್ರ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕು ಬಂಕಾಪುರ ಗ್ರಾಮದಲ್ಲಿ ಭರ್ಜರಿಯಾಗಿ ಗಣೇಶ ವಿಸರ್ಜನೆ ನಡೆಯಿತು.

 

 

ಬಂಕಾಪುರ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ನೆಹರು ಮೈದಾನದಲ್ಲಿ ಹಿಂದೂ ಮಹಾಸಭಾ ವತಿಯಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. 21 ದಿನಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗಿತ್ತು. 21ನೇ ದಿನವಾದ ನಿನ್ನೆ ಗಣೇಶ ಮೂರ್ತಿಯ ವಿಸರ್ಜನೆ ನಡೆಯಿತು. ಮಧ್ಯಾಹ್ನದ ವೇಳೆಗೆ ಗಣೇಶ ವಿಸರ್ಜನೆಯ ಮೆರವಣಿಗೆ ಆರಂಭವಾಗಿತ್ತು. ಭರ್ಜರಿಯಾಗಿ ಡಿಜೆ ಸದ್ದಿನೊಂದಿಗೆ ಆರಂಭವಾದ ಗಣೇಶೋತ್ಸವ ಮೆರವಣಿಗೆ ಪಟ್ಟಣದ ಬಹುತೇಕ ಎಲ್ಲ ಬೀದಿಗಳಲ್ಲೂ ಸಂಚರಿಸಿತು. ಯುವಕರು ಗಣೇಶನ‌ ಮೂರ್ತಿಯ ಮುಂದೆ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.

ಜಿಲ್ಲೆಯ ಬಹುತೇಕ ಎಲ್ಲ ಪೊಲೀಸ್ ಠಾಣೆಗಳ ಪಿಎಸ್ಐ, ಸಿಪಿಐಗಳು ಹಾಗೂ ಡಿವೈಎಸ್ಪಿಗಳು, ಹೆಚ್ಚುವರಿ ಎಸ್ಪಿ ಸೇರಿದಂತೆ ನಾಲ್ಕು ನೂರು ಜನ ಪೊಲೀಸ್ ಸಿಬ್ಬಂದಿಗಳು ಗಣೇಶ ವಿಸರ್ಜನೆ ಮೆರವಣಿಗೆಗೆ ಬಂದೋಬಸ್ತ್ ಒದಗಿಸಿದ್ರು. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಆರಂಭವಾದ ಗಣೇಶನ‌ ವಿಸರ್ಜನೆ ಮೆರವಣಿಗೆ ತಡರಾತ್ರಿಯವರೆಗೂ ನಡೆಯಿತು

_____

Share this News
error: Content is protected !!