June 22, 2021

ನಬಾರ್ಡ್ ಅಧಿಕಾರಿಗಳು ಹಾಗೂ ಶಾಸಕರಿಂದ ಜಂಟಿಯಾಗಿ ಹೂಲಿಹಳ್ಳಿಯ ಮೇಗಾ ಮಾರುಕಟ್ಟೆಯ ಕಾಮಗಾರಿ ಪರಿಶೀಲನೆ

ಇಂದು ಮೇಗಾ ಮಾರುಕಟ್ಟೆ ಪ್ರಾಂಗಣ, ಹೂಲಿಹಳ್ಳಿ, ತಾ:ರಾಣೆಬೆನ್ನೂರ ಇಲ್ಲಿಯ ಕಾಮಗಾರಿ ಪರಿಶೀಲನೆಗೆ ತೆರಳಿದ ನಬಾರ್ಡ್ ಅಧಿಕಾರಿಗಳು ಮತ್ತು ಸುಪರಿಡೆಂಟೆಂಟ್ ಇಂಜನಿಯರ್ ಬೆಂಗಳೂರು ರವರ ಜೊತೆ ಜಂಟಿಯಾಗಿ ಕಾಮಗಾರಿ ಪರಿಶೀಲನೆ ಮಾಡಿದ ಮಾನ್ಯ ಶಾಸಕರಾದ ಶ್ರೀ ವಿರುಪಾಕ್ಷಪ್ಪ ಬಳ್ಳಾರಿ ಯವರು.

 

ರೂ.105 ಕೋಟಿಗಳ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಸದರಿ ಯೋಜನೆ ಮಾರುಕಟ್ಟೆಗೆ ಸಂಭಂದಿಸಿದ ಮೂಲಭೂತ ಸೌಕರ್ಯಗಳನ್ನ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಇಂತಹ ದೊಡ್ಡ ಪ್ರಮಾಣದ ಯೋಜನೆಗೆ ಅನುದಾನ ನೀಡಿದ ಮಾನ್ಯ ಮುಖ್ಯ ಮಂತ್ರಿಗಳಿಗೆ ಮತ್ತು ನಬಾರ್ಡ್ ಅಧಿಕಾರಿಗಳಿಗೆ ಮತ್ತೊಮ್ಮೆ ಅಭಿನಂದನೆಗಳನ್ನ ತಿಳಿಸಿದರು.


ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಎಪಿಎಂಸಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ವರ್ಗ ರಾಣೇಬೆನ್ನೂರ್ ಭಾಗವಹಿಸಿದ್ದರು. ­

Share this News
error: Content is protected !!