March 7, 2021

ಮಹಿಳಾ ಸಮಾನತೆ ಸಾರಿದ ನೀಲಾಂಬಿಕಾ ಜಾತ್ರೆ

ಹಾನಗಲ್ – ಹಾವೇರಿ ಜಿಲ್ಲೆ ಹಾನಗಲ್ ತಾಲೂಕ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಶಿವಶರಣೆ ನೀಲಾಂಬಿಕಾ ದೇವಿಯ ರಥವನ್ನು ಮಹಿಳೆಯರೇ ಎಳೆಯುವ ಮೂಲಕ ಮಹಿಳಾ ಸಮಾನತೆ, ಸೌಹಾರ್ದತೆ‌ ಸಾರಿದರು.

ಇದನ್ನೂ ಓದಿ  ಮನವಿ ಕೊಟ್ಟ‌ ಒಂದೇ ದಿನಕ್ಕೆ ಊರಿಗೆ ಬಂತು ಬಸ್.! ಖುಷಿಯಲ್ಲಿದ್ದ ಗ್ರಾಮಸ್ಥರು ಏನು ಮಾಡಿದ್ರು ಗೊತ್ತಾ..?

ಬೆಳಿಗ್ಗೆ ನೀಲಾಂಬಿಕೆ ದೇವಿಗೆ ಅಭಿಷೇಕ ಮಾಡಿ, ಉಡಿ ತುಂಬಲಾಯಿತು. ನಂತರ ಸಂಜೆ ನಡೆದ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ರಥವನ್ನು ಎಳೆದು ಸಂಭ್ರಮಿಸಿದರು.

ಇದನ್ನೂ ಓದಿ  ಸವದತ್ತಿ ಯಲ್ಲಮ್ಮ ಹಾಗೂ ಚಿಂಚಲಿ‌‌ ಮಾಯಕ್ಕ ದೇವಸ್ಥಾನಕ್ಕೆ ಭಕ್ತರ ನಿಷೇಧ

ರಥೋತ್ಸವದಲ್ಲಿ ಡೊಳ್ಳು ಕುಣಿತ, ಬಜನೆ, ಮಜಲು ವೇದ, ಝೆಂಕಾರ ಮೊಳಗಿದ್ದವು. ಯುವಕರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಹರಿಕೆ ತಿರಿಸಿದರು.

ರಥ ಮೆರವಣಿಗೆ ಗ್ರಾಮದ ಬನ್ನಿಮುಡಿ ಕಟ್ಟೆಯಿಂದ ಆರಂಭವಾಗಿ ಹಕ್ಕಲಮದೇವಿ ದೇವಸ್ಥಾನದವರಿಗೆ ಸಾಗಿ ಹಕ್ಕಲಬಸವೇಶ್ವರ ದೇವಸ್ಥಾನದ ಆವಣದಲ್ಲಿ ಸಮಾರೋಪಗೊಳಿಸಲಾಯಿತು.

ಇದನ್ನೂ ಓದಿ  ಸರಿಸುಮಾರು ಮುಂಜಾವಿನ ಮೂರು ಗಂಟೆ ಸಮಯ, ಒಂದು ಕೂಗು, ಎರಡು ಮನೆಯ ಹತ್ತಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿತು

 

_____

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!