March 7, 2021

ಅಬ್ಬಬ್ಬಾ.. ಏನ್ ಚೆಂದಾ..‌ ಏನ್ ಅಂದಾ..‌ ಕುಂಚದಲ್ಲಿ ‌ಅರಳಿದ ಗೋಡೆಗಳು.

ಹಾವೇರಿ – ಹಾವೇರಿಯಲ್ಲಿ ಸಾಧಕ ರತ್ನ ಫೇಸ್ಬುಕ್ ಪೇಜ್ ಹಾಗೂ ನೆಹರು ಯುವ ಕೇಂದ್ರ ಓಂ ಯುವಕ ಸಂಘ ಹಾಗೂ ಸ್ವಾಮಿ ವಿವೇಕಾನಂದ ಯುವಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಾವೇರಿ ನಗರದಲ್ಲಿ ಪ್ರಥಮವಾಗಿ ಗೋಡೆಯ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗೋಡೆಯ ಮೇಲೆ ಇಂದು ಬೆಳಿಗ್ಗೆಯಿಂದ ಚಿತ್ರ ಬಿಡಿಸುವ ಕಲಾವಿದರು ತಮ್ಮ ಕಲಾಕುಂಚ ದಲ್ಲಿ ಅತ್ಯದ್ಭುತವಾದ ಸ್ವಚ್ಛ ಭಾರತ್ ಬಿಂಬಿಸುವ ಚಿತ್ರಗಳನ್ನು ರಚಿಸಿದರು.

ಇದನ್ನೂ ಓದಿ  ರೈಲು ತಡೆಯಲು ಬಂದ ರೈತರನ್ನು, ವಶಕ್ಕೆ ಪಡೆದ ಪೊಲೀಸರು

ಅದರಲ್ಲಿ ಮದುವೆ ಮಾಡಿ ಗಂಡನ ಮನೆಗೆ ಕರೆದುಕೊಂಡು ಹೋಗುವಾಗ ಶೌಚಾಲಯವನ್ನು ಉಡುಗೊರೆಯಾಗಿ ನೀಡುವ, ಮರಗಳು ಗಾಡಿಗಳನ್ನು ಕಸಗುಡಿಸಿ ಕಸದ ಬುಟ್ಟಿಗೆ ತುಂಬುವ ಹೀಗೆ ಅತ್ಯದ್ಭುತ ವಿವಿಧ ರೀತಿಯ ಚಿತ್ರಗಳು ಕಲಾವಿದರು ಬಿಡಿಸಿದರು.

ಇದನ್ನೂ ಓದಿ  ಸೈಬರ್ ಅಪರಾಧಗಳ ಬಗ್ಗೆ ಅಧಿಕಾರಿಗಳು ಎಚ್ಚರವಹಿಸುವುದು ಅವಶ್ಯ- ಎ.ಎಚ್.ಜಮಖಾನೆ.

 

ಈ ಸಂದರ್ಭದಲ್ಲಿ ಮಾತನಾಡಿದ ಓಂ ಸಂಘದ ಅಧ್ಯಕ್ಷರಾದ ಗಣೇಶ ರಾಯ್ಕರ್, ಹಾವೇರಿ ನಗರದಲ್ಲಿ ಇದೇ ಮೊದಲ ಬಾರಿಗೆ ಗೋಡೆ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿದೆ.

ಇದಲ್ಲದೆ ಈ ಹಿಂದೆಯೂ ಕೂಡ ವಿವಿಧ ವಿಷಯದ ಮೇಲೆ ಚಿತ್ರಕಲಾ ಸ್ಪರ್ಧೆ ನಡೆಸಿ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಪ್ರೋತ್ಸಾಹಿಸಿ ಮಕ್ಕಳಲ್ಲಿನ ಕಲೆ ಪರಿಸರ ಜಾಗೃತಿ ಮೇಲೆ ಆಗಲಿ ಎನ್ನುವುದು. ಚಿತ್ರದಿಂದ ನಗರವು ಕೂಡ ಸುಂದರವಾಗಿ ಕಾಣುತ್ತದೆ ಅಂತಾ ಹೇಳಿದರು.

ಇದನ್ನೂ ಓದಿ  ಓಡಿ ಹೋಗಿ ಮದ್ವೆ ಆಗುತ್ತಿದ್ದ ಪ್ರೇಮಿಗಳಿಗೆ ಆಶೀರ್ವದಿಸಿದ ಎಮ್.ಪಿ.ರೇಣುಕಾಚಾರ್ಯ: ಪೋಷಕರು ಏನಂದ್ರು ಗೊತ್ತಾ...?

 

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!