ಹಾವೇರಿ – ಸಧ್ಯ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸೋ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಅದು ಪಡಿತರ ವ್ಯವಸ್ಥೆಯಲ್ಲಿ ಬರದೆ ಇರೋದ್ರಿಂದ ಕೇಂದ್ರ ಸರಕಾರ ಅದನ್ನ ನಮಗೆ ಕೊಟ್ಟಿಲ್ಲ. ಪಡಿತರ ವ್ಯವಸ್ಥೆಯಲ್ಲಿ ಬರದೆ ಇರೋದ್ರಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಬಸರಿಹಳ್ಳಿ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು
ಯಾವ ಶಾಸಕರು ಹೊರ ಪಕ್ಷದಿಂದ ಬರೋ ಅವಶ್ಯಕತೆ ಇಲ್ಲ. ಈಗಾಗಲೆ 119 ಜನ ಬಿಜೆಪಿ ಶಾಸಕರಿದ್ದೇವೆ. ಈಗ ಮೂರು ಕ್ಷೇತ್ರಗಳಿಗೆ ನಡೆಯೋ ಚುನಾವಣೆಯಲ್ಲಿ ನಾವು ಗೆಲ್ತೇವೆ.
ಹೀಗಾಗಿ ಹೊರಗಡೆಯಿಂದ ಯಾವ ಶಾಸಕರು ಬರೋ ಅವಶ್ಯಕತೆ ಇಲ್ಲ ಎಂದರು.
ಸಚಿವ ಉಮೇಶ ಕತ್ತಿಯವರ ಹೇಳಿಕೆ ನೋಡಿದೆ.ಅವರು ಯಾವ್ಯಾವ ವಿಚಾರದಿಂದ ಆ ರೀತಿ ಹೇಳಿದ್ದಾರೆ ಎಂಬುದರ ಬಗ್ಗೆ ಅವರಿಂದ ಸರಿಯಾದ ಉತ್ತರ ಸಿಗಬೇಕಾಗುತ್ತೆ. ಅದರೆ ಕೆಲವೆಡೆ ಅಗತ್ಯಕ್ಕಿಂತ ಹೆಚ್ಚು ಕಾರ್ಡ್ ಗಳಿವೆ. ಅನಧೀಕೃತ ಕಾರ್ಡ್ ಗಳನ್ನ ರದ್ದು ಮಾಡಲು ಅನುಕೂಲ ಆಗುತ್ತದೆ ಎಂದರು.
ಮೀಸಲಾತಿ ಕೇಳೋದು ಎಲ್ಲರ ಹಕ್ಕು. ಎಲ್ಲವನ್ನ ಪರಿಶೀಲನೆ ಮಾಡಿ, ಕಾನೂನಿನ ಚೌಕಟ್ಟಿನ ಒಳಗೆ ಯಾರ್ಯಾರಿಗೆ ಕೊಡಬೇಕು ಎಂಬುದನ್ನ ಸರಕಾರ ತೀರ್ಮಾನ ಮಾಡುತ್ತದೆ. ಇದು ಸರಕಾರಕ್ಕೆ ಬಿಟ್ಟ ವಿಷಯ. ಸರಕಾರ ಎಲ್ಲವನ್ನ ಅಧ್ಯಯನ ಮಾಡಿ ಯಾರಿಗೆ ಕೊಡಬೇಕು ಎಂಬ ತೀರ್ಮಾನ ಮಾಡುತ್ತದೆ ಎಂದರು.
______
More Stories
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತರುವುದಕ್ಕಾಗಿ ಹನಿಟ್ರ್ಯಾಪ್ ನಡೆದಿರುವ ಸಾಧ್ಯತೆ, ಎಲ್ಲ ಅಯಾಮಗಳಿಂದ ತನಿಖೆ. -ಬಸವರಾಜ್ ಬೊಮ್ಮಾಯಿ
ಕೊರೋನಾ ಲಸಿಕೆ ಪಡೆದ ನಂತರ ಕೃಷಿ ಸಚಿವ ಬಿ.ಸಿ.ಪಾಟೀಲ ಏನು ಹೇಳಿದ್ರು ಗೊತ್ತಾ..?
ಬಿಜೆಪಿ ಸಚಿವರ ಮೇಲೆ ಮುಸ್ಲಿಂ ಅಭಿಮಾನಿಯ ಅಭಿಮಾನ. ಅಭಿಮಾನಿ ಮಾಡಿದ್ದಾದರೂ ಏನು..!?.