March 7, 2021

ನಿಮ್ಮ ತಂದೆ ಸಾವಿರಾರು ಉಳಿಪೆಟ್ಟು ಬಿದ್ದ ಮೇಲೆ ರಾಜಾಹುಲಿ ಆಗಿದ್ದಾರೆ, ನೀವು ಹಾಗೆ ಆಗಿ.-ಸಹಕಾರ ಸಚಿವ ಎಸ್.ಟಿ ಸೋಮಶೇಖರ್.

ಹಾವೇರಿ – ವಿಜಯೇಂದ್ರ ಮುಂದಿನ ರಾಜಾಹುಲಿ ಅಂತಲ್ಲ. ಯಡಿಯೂರಪ್ಪ ನಾಲ್ವತ್ತು ವರ್ಷಗಳ ರಾಜಕಾರಣದಲ್ಲಿ ಅನೇಕ ಏಳು ಬೀಳುಗಳನ್ನ ನೋಡಿದ್ದಾರೆ.
ಸಾವಿರಾರು ಉಳಿ ಪೆಟ್ಟುಗಳನ್ನ ನೋಡಿದ್ದಾರೆ. ಈಗ ನಾಲ್ಕನೆ ಬಾರಿ ಸಿಎಂ ಆಗಿ ರಾಜಾಹುಲಿ ಅನಿಸಿಕೊಂಡಿದ್ದಾರೆ. ಅದೆ ರೀತಿ ನಿಮಗೂ ಸಾವಿರಾರು ಉಳಿ ಪೆಟ್ಟು ಬೀಳುತ್ತೆ ಎಂದು ಹೇಳಿದ್ದಾನೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹೇಳಿದ್ದಾರೆ.

ಇದನ್ನೂ ಓದಿ  ಆದರ್ಶ ವ್ಯಕ್ತಿಗಳ ಬದುಕು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ - ರವಿಕುಮಾರ ಪೂಜಾರ್

ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು
ಬಸರಿಹಳ್ಳಿ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು, ಈಗಾಗಲೆ ಐವತ್ತರಿಂದ ಅರವತ್ತು ಫರ್ಸೆಂಟ್ ಉಳಿ ಪೆಟ್ಟು ಬೀಳುತ್ತದೆ. ಅದೆಲ್ಲ ಬಿದ್ದ ಮೇಲೆ ಒಂದು ಸುಂದರ ಮೂರ್ತಿ ಆಗುತ್ತದೆ. ತಂದೆ ಹೇಗೆ ರಾಜಾಹುಲಿ ಅನಿಸಿಕೊಂಡರು ಹಾಗೆ ನೀವು ರಾಜಾಹುಲಿಯಂತೆ ಸೇವೆ ಮಾಡಿ ಅಂತಾ ಹೇಳಿದ್ದೇನೆ ಎಂದರು.

ಇದನ್ನೂ ಓದಿ  ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತರುವುದಕ್ಕಾಗಿ ಹನಿಟ್ರ್ಯಾಪ್ ನಡೆದಿರುವ ಸಾಧ್ಯತೆ, ಎಲ್ಲ ಅಯಾಮಗಳಿಂದ ತನಿಖೆ. -ಬಸವರಾಜ್ ಬೊಮ್ಮಾಯಿ

ಟಿವಿ, ಬೈಕ್ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಎಂಬ ಸಚಿವ ಉಮೇಶ ಕತ್ತಿ ಹೇಳಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಹೊಸ ಮಂತ್ರಿಗಳು ಬಂದಿದ್ದಾರೆ. ಹೊಸ ಮಂತ್ರಿಗಳು ಹೇಳಿದ್ದರು ಹೇಳಿರಬಹುದು. ಆ ರೀತಿ ಮಾಡಲು ಆಗೋದಿಲ್ಲ.
ಕೆಲವರು ಮೂರು, ನಾಲ್ಕು ಇಟ್ಕೊಂಡಿರೋ ಮಾಹಿತಿ ಇದೆ. ನಿಯಮ ಉಲ್ಲಂಘನೆ ಮಾಡಿದವರ ಕಾರ್ಡ್ ಕ್ಯಾನ್ಸಲ್ ಮಾಡ್ತೇವೆ ಅಂತಾ ಹೇಳಿರಬೇಕಷ್ಟೆ‌. ಕೋವಿಡ್19 ಇರೋದ್ರಿಂದ ಎಕ್ಸ್ ಟ್ರಾ ಸೆಸ್ ಹಾಕಿದ್ದಾರೆ ಅಷ್ಟೆ. ಅದು ಬಿಟ್ರೆ ಬೇರೇನಿಲ್ಲ. ಏರಿಳಿತ ಆಗುತ್ತಿರುತ್ತೆ‌. ಒಂದ್ಸಲ ಕಡಿಮೆ ಆಗ್ತಾ ಇರುತ್ತೆ.ಎಲ್ಲವನ್ನ ಸ್ವಲ್ಪ ಅಡ್ಜಸ್ ಮೆಂಟ್ ಮಾಡಿಕೊಂಡು ಹೋಗಬೇಕು ಎಂದರು.

ಇದನ್ನೂ ಓದಿ  SHIGGOAN | ರಸ್ತೆಯ ಮದ್ಯದಲ್ಲಿ ಚಹಾ ಮಾಡಿ ಕುಡಿದು ಪ್ರತಿಭಟನೆ.

_______

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!