June 22, 2021

ಬಂಜಾರರ 160ಕ್ಕೂ ಹೆಚ್ಚು ವೀರರು ಮತ್ತು ಪವಾಡ ಪುರುಷರಲ್ಲಿ ಸೇವಾಲಾಲ್ ಮುಂಚೂಣಿಯಲ್ಲಿದ್ದಾರೆ. -ಶಾಸಕ ವಿರುಪಾಕ್ಷಪ್ಪ ಬಳ್ಳಾರಿ

ಸಂತ ಸೇವಾಲಾಲ 282 ಜಯಂತಿ ಆಚರಣೆ.

ಬ್ಯಾಡಗಿ – ಹಾವೇರಿ ಜಿಲ್ಲೆ ಬ್ಯಾಡಗಿ ತಹಶೀಲ್ದಾರ ಕಛೇರಿಯಲ್ಲಿ ಸಂತ ಶ್ರೀ ಸೇವಲಾಲ ಮಹಾರಾಜರ 282 ಜಯಂತಿ ಆಚರಣೆ ಮಾಡಲಾಯಿತು. ಜಯಂತಿಯಲ್ಲಿ ಶಾಸಕ ಶ್ರೀ ವಿರುಪಾಕ್ಷಪ್ಪ ರು ಬಳ್ಳಾರಿ ರವರು ಭಾಗಿಯಾಗಿದ್ದರು.

ಕಾರ್ಯಕ್ರಮ ಮಾತನಾಡಿದ ಅವರು ಲೋಕ ಕಲ್ಯಾಣಕ್ಕಾಗಿ ದೇಶದಲ್ಲಿ ಅನೇಕ ಸಾಧು, ಸಂತರು, ಶರಣರು, ಪವಾಡ ಪುರುಷರು ಜನಿಸಿದ್ದಾರೆ. ಸಮಾಜದಲ್ಲಿ ಮೌಢ್ಯತೆ, ಕಂದಾಚಾರ ತೊಡೆದು ಹಾಕಲು ಶ್ರಮಿಸಿದವರಲ್ಲಿ ಸಂತ ಸೇವಾಲಾಲ್‌ ಕೂಡ ಒಬ್ಬರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬಂಜಾರರ 160ಕ್ಕೂ ಹೆಚ್ಚು ವೀರರು ಮತ್ತು ಪವಾಡ ಪುರುಷರಲ್ಲಿ ಸೇವಾಲಾಲ್ ಮುಂಚೂಣಿಯಲ್ಲಿದ್ದಾರೆ. ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದರೂ ಸೇವಾ ಮನೋಭಾವದಿಂದ ಸಮುದಾಯದ ರಕ್ಷಣೆಗೆ ನಿಂತ ಮಹನೀಯ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಶ್ರೀ ರವಿ ಕೊರವರ, ಪುರಸಭೆ ಅಧ್ಯಕ್ಷರಾದ ಶ್ರೀಮತಿ ಕವಿತಾ ಸೊಪ್ಪಿನಮಠ, ಉಪಾಧ್ಯಕ್ಷರಾದ ಶ್ರೀಮತಿ ಲೀಲಾವತಿ ಬಡಿಗೇರ, ಬ್ಯಾಡಗಿ ಎಪಿಎಂಸಿ ಅಧ್ಯಕ್ಷರಾದ ಶ್ರೀ ವೀರಭದ್ರಣ್ಣ ಗೊಡಚಿ, ಮಾಜಿ ಅಧ್ಯಕ್ಷರಾದ ಜಗದೀಶಣ್ಣ ಕಣಗಲಬಾವಿ, ಬಂಜಾರ ಸಮುದಾಯದ ತಾಲೂಕಾ ಅಧ್ಯಕ್ಷರಾದ ಶ್ರೀ ಅರ್ಜುನಪ್ಪ ಲಮಾಣಿ, ಭಾರತೀಯ ಜನತಾ ಪಕ್ಷದ ಬ್ಯಾಡಗಿ ಮಂಡಲದ ಅಧ್ಯಕ್ಷರಾದ ಶ್ರೀ ಸುರೇಶ ಆಸಾದಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ವೀರೇಂದ್ರ ಶೆಟ್ಟರ್, ಮುಖಂಡರಾದ ಶ್ರೀ ಶಂಕ್ರಣ್ಣ ಮಾತನವರ, ಶ್ರೀ ಸುರೇಶಣ್ಣ ಯತ್ನಳ್ಳಿ, ಶ್ರೀ ಸುರೇಶಣ್ಣ ಉದ್ಯೋಗಣ್ಣನವರ, ಶ್ರೀ ಅಲ್ಲಾಭಕ್ಷ ಬಳ್ಳಾರಿ, ಶ್ರೀ ಶಾಂತಣ್ಣ ದೊಡ್ಡಮನಿ, ಶ್ರೀ ಉಮೇಶಣ್ಣ ರಟ್ಟಿಹಳ್ಳಿ, ಹಾಗೂ ಬಂಜಾರ ಸಮುದಾಯದ ಪ್ರಮುಖರು, ತಾಲೂಕಾ ಆಡಳಿತ ಕಛೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share this News
error: Content is protected !!