June 22, 2021

ದೇಶ ಸೇವೆ ಸಲ್ಲಿಸಿ ಮರಳಿ ಆಗಮಿಸಿದ ಯೋಧನಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ.

ಹಾವೇರಿ – ಹದಿನೇಳು ವರ್ಷಗಳ ಕಾಲ‌ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಊರಿಗೆ ಮರಳಿದ ನಿವೃತ್ತ ಯೋಧನಿಗೆ ಗ್ರಾಮದ ಜನರು ಅದ್ಧೂರಿಯಾಗಿ ಸ್ವಾಗತ ಕೋರಿದರು.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹನುಮಾಪುರ ಗ್ರಾಮದ ನೂಲೇಶ ಲಮಾಣಿ, ಹದಿನೇಳು ವರ್ಷಗಳ‌ ಕಾಲ ಭಾರತೀಯ ಸೇನೆಯಲ್ಲಿ ದೇಶ ಸೇವೆ ಮಾಡಿದ್ದಾರೆ. ನಿವೃತ್ತಿಯಾಗಿ ಇವತ್ತು ಊರಿಗೆ ಮರಳಿದರು. ಹೀಗಾಗಿ ಗ್ರಾಮದ ಜನರು ತೆರೆದ ವಾಹನದಲ್ಲಿ ನಿವೃತ್ತ ಯೋಧನನ್ನ ಮೆರವಣಿಗೆ ಮಾಡಿದರು.

ಗ್ರಾಮದ ಯುವಕರು ಬೈಕ್ ರ್ಯಾಲಿ ನಡೆಸೋ ಮೂಲಕ ನಿವೃತ್ತ ಯೋಧ‌ ನೂಲೇಶನನ್ನ ಮೆರವಣಿಗೆ ಮೂಲಕ ಊರಿಗೆ ಕರೆದುಕೊಂಡು ಹೋದ್ರು. ನೂಲೇಶ, ರಾಣೆಬೆನ್ನೂರು ನಗರಕ್ಕೆ ಬರುತ್ತಿದ್ದಂತೆ ಕುಟುಂಬದವರು ಹಾಗೂ ಗ್ರಾಮದ ಜನರು ಹೂಮಾಲೆ ಹಾಕಿ ಸ್ವಾಗತ ಮಾಡಿ, ಮೆರವಣಿಗೆ ಮಾಡಿದರು.

_____

Share this News
error: Content is protected !!