ಅನುದಾನ ಹಂಚಿಕೆ ತಾರತಮ್ಯ ಪ್ರಶ್ನಿಸಿದ ನಗರಸಭೆ ಸದಸ್ಯನ ಮೇಲೆ ಶಾಸಕ ಗರಂ.
ರಾಣೇಬೆನ್ನೂರು – ನಗರಸಭೆ ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ಪ್ರಶ್ನಿಸಿದ್ದಕ್ಕೆ ನಗರಸಭೆ ಸದಸ್ಯನ ಮೇಲೆ ಶಾಸಕ ಗರಂ ಆದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ದೊಡ್ಡಪೇಟೆಯಲ್ಲಿ ನಡೆದಿದೆ.
ನಗರಸಭೆಗೆ ಬಿಡುಗಡೆ ಆಗಿದ್ದ ಐದು ಕೋಟಿ ರುಪಾಯಿ ಎಸ್ಎಫ್ ಸಿ ಅನುದಾನವನ್ನ, 35 ವಾರ್ಡ್ ಗಳಿಗೆ ಸಮನಾಗಿ ಅನುದಾನ ಹಂಚಿಕೆ ಮಾಡುವಂತೆ ನಗರಸಭೆಯ ಬಹುತೇಕ ಸದಸ್ಯರು ಹೇಳಿದ್ದರು. ಅದರೆ ಮೂರು ವಾರ್ಡ್ ಗಳಿಗೆ ಮಾತ್ರ ಹಣ ಹಂಚಿಕೆ ಮಾಡಿ ಕಾಮಗಾರಿಗೆ ಚಾಲನೆಯನ್ನ ಶಾಸಕ ಅರುಣಕುಮಾರ ಪೂಜಾರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೂರೇ ವಾರ್ಡಿಗೆ ಹಣ ಹಂಚಿಕೆ ಮಾಡಿದ್ದನ್ನ ಪ್ರಶ್ನಿಸಿದ ನಗರಸಭೆಯ ಕಾಂಗ್ರೆಸ್ ಸದಸ್ಯ ನಿಂಗರಾಜ ಕೋಡಿಹಳ್ಳಿ ವಿರುದ್ಧ ಶಾಸಕ ಗರಂ ಆಗಿದ್ದಾರೆ. ಏ ಗೊತ್ತೈತಿ ನಡಿಯೋ, ನನಗೆಲ್ಲ ಗೊತ್ತಿದೆ ಎಂದು ಸದಸ್ಯನನ್ನ ಶಾಸಕ ಪೂಜಾರ ಗದರಿಸಿದ್ದಾರೆ. ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್.ಶಂಕರ ಎದುರಲ್ಲೆ ನಡೆದಿದೆ.
More Stories
ಬೈಕ್ ಗೆ ಟಿಪ್ಪರ್ ಡಿಕ್ಕಿ- ಸ್ಥಳದಲ್ಲೆ ನಾಲ್ವರು ಸಾವು
ಚಿತ್ರಕಲಾ ಸ್ಪರ್ಧೆಯಲ್ಲಿ, ರಾಣೇಬೆನ್ನೂರಿನ ಇಬ್ಬರು ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ
ರಕ್ತಧಾನ ಮಾಡುವ ಮೂಲಕ ಛತ್ರಪತಿ ಶಿವಾಜಿ ಜಯಂತಿ ಆಚರಣೆ