June 22, 2021

ಬಸರಿಹಳ್ಳಿಯಲ್ಲಿ ನೂತನ ಹೆಲಿಪ್ಯಾಡ್ ಉದ್ಘಾಟನೆ

ಬಸರಿಹಳ್ಳಿಯ ನೂತನ ಹೆಲಿಪ್ಯಾಡ್ ಉದ್ಘಾಟಿಸಿದ ಸಚಿವರಾದ ಎಸ್.ಟಿ.ಸೋಮಶೇಖರ-ಬಿ.ಸಿ.ಪಾಟೀಲ

ಹಾವೇರಿ: ಹಿರೇಕೆರೂರ ತಾಲೂಕು ಬಸರೀಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾದ ಹೆಲಿಪ್ಯಾಡ್‍ ನ್ನು ಸಹಕಾರಿ ಸಚಿವರಾದ ಎಸ್.ಟಿ.ಸೋಮಶೇಖರ ಹಾಗೂ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಉದ್ಘಾಟಿಸಿದರು.

ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಬಸರೀಹಳ್ಳಿಗೆ ಆಗಮಿಸಿದ ಉಭಯ ಸಚಿವರು ಸೋಮವಾರ ರಿಬ್ಬನ್ ಕತ್ತರಿಸುವುದರ ಮೂಲಕ ನೂತನ ಹೆಲಿಪ್ಯಾಡ್‍ಗೆ ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ಉಭಯ ಸಚಿವರು ನೂತನ ಅಂಬ್ಯುಲೆನ್ಸ್ ವಾಹನ ಸೇವೆಗೆ ಚಾಲನೆ ನೀಡಿದರು.


ಮಲೇನಾಡು ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಹಿರೇಕೆರೂರು ತಾಲೂಕಿನ ಬಸರೀಹಳ್ಳಿಯಲ್ಲಿ 26.90 ಲಕ್ಷ ರೂ. ವೆಚ್ಚದಲ್ಲಿ ಹೆಲಿಪ್ಯಾಡ್ ಕಾಮಗಾರಿ ಹಾಗೂ 38.10 ಲಕ್ಷ ರೂ. ವೆಚ್ಚದಲ್ಲಿ ಹೆಲಿಪ್ಯಾಡ್ ಆವರಣಗೋಡೆ ಹಾಗೂ ಸಿಡಿ ನಿರ್ಮಾಣ ಮಾಡಲಾಗಿದೆ.

ನೂತನ ಹೆಲಿಪ್ಯಾಡ್ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ಸಹಕಾರಿ ಖಾತೆ ಸಚಿವರಾದ ಎಸ್.ಟಿ.ಸೋಮಶೇಖರ ಅವರು ಕೃಷಿ ಸಚಿವರ ಕ್ಷೇತ್ರದವಾದ ಬಸರೀಹಳ್ಳಿಯಲ್ಲಿ ಹೆಲಿಪ್ಯಾಡ್ ಉದ್ಘಾಟನೆ ಹಾಗೂ ಹಂಸಭಾವಿಯ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿದೆ. ಹೆಲಿಪ್ಯಾಡ್ ಉದ್ಘಾಟನೆಗೆ ಹೆಲಿಕ್ಯಾಪ್ಟರ್ ಮೂಲಕವೇ ಕರೆತಂದಿರುವುದು ವಿಶೇಷವಾಗಿದೆ. ಈ ಕಾರ್ಯ ಕೃಷಿ ಸಚಿವರಿಂದ ಮಾತ್ರ ಸಾಧ್ಯ. ಕೃಷಿ ಖಾತೆಯಲ್ಲಿ ಕ್ರಿಯಾಶೀಲವಾಗಿ ಕೆಲಸಮಾಡುತ್ತಿದ್ದಾರೆ. ಸಹಕಾರಿ ಇಲಾಖೆ, ಕೃಷಿ ಇಲಾಖೆಗೆ ಪರಸ್ಪರ ಸಹಕಾರದಿಂದ ಎಲ್ಲ ನೆರವು ನೀಡುವುದಾಗಿ ಹೇಳಿದರು.


ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯು.ಬಿ.ಬಣಕಾರ, ತಾಲೂಕು ಪಂಚಾಯತಿ ಅಧ್ಯಕ್ಷ ರಾಜು ಬಣಕಾರ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವರಾಜ ಹರಿಜನ, ಎನ್.ಎಂ.ಈಟೇರ, ಶ್ರೀಮತಿ ಮಹದೇವಕ್ಕ ಗೋಪಕ್ಕಳಿ ಇತರರು ಉಪಸ್ಥಿತರಿದ್ದರು.

Share this News
error: Content is protected !!