June 22, 2021

ಅಲೆಲೆಲೆ… ದರ್ಶನ ಅಭಿಮಾನಿಗಳು ಏನ್ ಮಾಡಿದ್ರು ಗೊತ್ತಾ…!?

ಸ್ಯಾಂಡಲ್‌ವುಡ್‌ನ ಓಡುವ ಕುದುರೆ, ಡಿ- ಬಾಸ್, ಐರಾವತ ದರ್ಶನ್ ಅವರ ಹುಟ್ಟು ಹಬ್ಬ ಇಂದು. ಡಿ ಬಾಸ್ ಅಂದ್ರೆನೇ ಒಂದ ಶಕ್ತಿ. ಅಂತಹ ಮಹಾನ್ ಶಕ್ತಿಯ ಬರ್ತ್ ಡೇ ಸಂಭ್ರಮ ಅಂದ್ರೆನೇ ಅಭಿಮಾನಿಗಳಿಗೆ ಮತ್ತೊಂದು ದೀಪಾವಳಿಯಿದ್ದಂತೆ.

ಹಾವೇರಿಯಲ್ಲಿ ಡಿ ಬಾಸ್ ದರ್ಶನ ಅಭಿಮಾನಿಗಳು ಮಾಡಿದ ಕೆಲಸ ನೀವು ಕೇಳಿದ್ರೆ ಹೆಮ್ಮೆ ಪಡೋದ ಅಂತ್ರೂ ಗ್ಯಾರಂಟಿ…!
ದರ್ಶನ್ ಅವರಿಗೆ ಪ್ರಾಣಿಗಳು ಅಂದ್ರೆ ತುಂಬಾ ಪ್ರೀತಿ. ತಮ್ನ ಫಾರ್ಮ್ ಹೌಸ್ ನಲ್ಲಿ ಒಂದು ಚಿಕ್ಕ ಪ್ರಾಣಿ ಸಂಗ್ರಹಾಲಯ ವನ್ನೆ ನಿರ್ಮಿಸಿದ್ದಾರೆ. ಆದರೆ ಈಗ ಅದು ವಿಷಯವಲ್ಲ, ಅವರನ್ನೇ ಮೀರಿಸುವಂತೆ ಅವರ ಅಭಿಮಾನಿಗಳು ಪ್ರಾಣಿ ಪ್ರೇಮಿಗಳಾಗಿದ್ದಾರೆ. ಹಾವೇರಿಯ ಡಿ ಬಾಸ್ ಅಭಿಮಾನಿಗಳು…!

ಹೌದು ಇಂದು ಡಿ ಬಾಸ್ ದರ್ಶನ್ ಹುಟ್ಟುಹಬ್ಬವಿರೋದ್ರಿಂದ ಹಾವೇರಿ ಅಭಿಮಾನಿಗಳು ಬೀದಿ ಬದಿ ಇರುವ ದನ-ಕರುಗಳಿಗೆ ಹುಲ್ಲನ್ನು ಹಾಕಿ ದರ್ಶನ್ ಅವರ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಕೇಕು ತಂದುಬಕಟ್ ಮಾಡಿ ದುಂದುವೆಚ್ಚ್ ಮಾಡದೇ, ದರ್ಶನ್ ಸರ್ ಅವರ ಬರ್ತ್ ಡೇ ಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಅವರಿಗೆ ಇರುವ ಪ್ರಾಣಿಗಳ ಮೇಲಿನ ಪ್ರೇಮ ನಮಗೆ ಈ ಕೆಲಸಕ್ಕೆ ಪ್ರೇರಣೆಯಾಗಿದೆ ಅಂತಾರೆ ಅಭಿಮಾನಿ ವರುಣ ಆನವಟ್ಟಿ ಮತ್ತು ಅವನ‌ ಸ್ನೇಹಿತರು. ಇವರ ಈ ಕೆಲಸಕ್ಕೆ ಹ್ಯಾಟ್ಸ್ ಅಪ್.

Share this News
error: Content is protected !!