March 7, 2021

ಹಬ್ಬಕ್ಕೆಂದು ಅಣ್ಣ ಕರಿಯಾಕ್ ಬಂದಿದ್ದಾ… ಸಂಜೆಯೊಳಗ್ ತವರು ಮನೆ ಸೇರಿದ್ರಾಯ್ತು ಅಂತಾ ಖುಷಿಲಿ ಹೊಂಟಿದ್ರು.. ಆದರೆ..!?

ಮಾವನ ಮನೆಗೆ ಖುಷಿಯಿಂದ ಹಬ್ಬಕ್ಕೆ ಹೊರಟ್ಟಿದ್ದ ಮಗು ಏನಾಯ್ತು!?

ಹಾವೇರಿ – ಅವರೆಲ್ಲಾ ಸಂತೋಷದಲ್ಲಿದ್ದರು. ಏಕೆಂದರೆ ತವರು ಮನೆಯಿಂದ ಅಣ್ಣ ಬಂದಿದ್ದಾ ಹಬ್ಬಕ್ಕೆ ಕರೀಯಾಕ. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಏಕೆಂದರೆ ಹಬ್ಬಕ್ಕೆ ಹೊರಟವರನ್ನ ಹಾವೇರಿ ಸಮೀಪ ಯಮ ಅಡ್ಡಗಟ್ಟಿದ್ದ. ಡಿವೈಡರ್ ರೂಪದಲ್ಲಿ ಪುಟ್ಟ ಕಂದನನ್ನ ಕರೆದುಕೊಂಡು ಹೋದ.

ಇದನ್ನೂ ಓದಿ  HAVERI | ನಾಳೆ ಅಗಡಿಯಲ್ಲಿ ಮೊದಲ ಬಾರಿಗೆ ಮುಕ್ತ ಯೋಗ ಶಿಬಿರ

ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹಾವೇರಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.‌ಮೃತ ಮಗುವನ್ನ ವೃಷದ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ  ಅಪಘಾತದ ರಭಸಕ್ಕೆ ಹೊತ್ತಿ ಉರಿದ ಕಾರು ಮತ್ತು ಟಿಪ್ಪರ್

ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡರನ್ನ ಅಣ್ಣಪ್ಪ ಲಮಾಣಿ, ಅಕ್ಕ ಯಶೋಧಾ ನಾಯಕ್ ಎಂದು ಗುರುತಿಸಲಾಗಿದೆ. ಶಿಗ್ಗಾಂವಿ ಶಿವಪುರ ತಾಂಡದಿಂದ, ಕಾಗಿನೆಲೆ ಗ್ರಾಮದ ಬಳಿಯ ನೆಲ್ಲಿಕೊಪ್ಪ ತಾಂಡಕ್ಕೆ ಹಬ್ಬಕ್ಕೆಂದು ಹೋಗುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ  ಬಂಜಾರರ 160ಕ್ಕೂ ಹೆಚ್ಚು ವೀರರು ಮತ್ತು ಪವಾಡ ಪುರುಷರಲ್ಲಿ ಸೇವಾಲಾಲ್ ಮುಂಚೂಣಿಯಲ್ಲಿದ್ದಾರೆ. -ಶಾಸಕ ವಿರುಪಾಕ್ಷಪ್ಪ ಬಳ್ಳಾರಿ

ಹಾವೇರಿ ಸಂಚಾರಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

_____

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!