March 7, 2021

ರಾತ್ರಿಯೆಲ್ಲಾ ವಾಟ್ಸಪ್ ನಲ್ಲಿ ಹರಿದಾಡಿದ ಆಕ್ಸಿಡೆಂಟ್ ಕಥೆ ಏನಾಯ್ತು..!?

ಹಾವೇರಿ – ಅದು ರಾತ್ರಿ ಎಂಟು ಗಂಟೆ ಸುಮಾರು, ಜಿಲ್ಲೆಯ ಎಲ್ಲಾ ವಾಟ್ಸಪ್ ಗ್ರೂಪ್ ನಲ್ಲಿ ಅಗಡಿ ಗ್ರಾಮದ ಬಳಿ ಬೈಕ್ ಅಪಘಾತ ಆಗಿದೆ ಆಂತಾ, ವಾಯ್ಸ್ ಮೆಸೇಜ್ ಜೊತೆಗೆ ನಾಲ್ಕು ಪೋಟೋ ಗಳು ಹರಿದಾಡಿದ್ದವು. ಹಾವೇರಿಯ ಜಿಲ್ಲೆಯ ಜನರು ಹಾಗೂ ಪೊಲೀಸ್ ರು ರಾತ್ರಿ ಯೆಲ್ಲಾ ಹುಡುಕಾಡಿದ್ದರು.  ಹಾವೇರಿ ತಾಲ್ಲೂಕು ಅಗಡಿ ಗ್ರಾಮದ ಬಳಿ ಪೊಲೀಸರು ಹಾಗೂ ಜನರು ಹೋಗಿ ಚೆಕ್ ಮಾಡಿದ್ದರೂ, ಅಪಘಾತ ಸುಳಿವು ಸಿಕ್ಕಿರಲಿಲ್ಲ.

ಇದನ್ನೂ ಓದಿ  ಮುತ್ತಿನ ರಾಶಿ ಮೂರು ಪಾಲು ಆದಿತಲೇ ಪರಾಕ್..!

ಹಾಗಾದರೆ ಅಪಘಾತ ಆಗಿದ್ದು ಏಲ್ಲಿ!?
ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮುಂಡಗೋಡ ತಾಲ್ಲೂಕು ಅಗಡಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ  ನಿರಂತರ ಅಧ್ಯಯನದಿಂದ‌ ಮಾತ್ರ ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಸಾಧ್ಯ-ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ

ಮೃತ ಉಪತಹಶೀಲ್ದಾರ ವಿಜಯಕುಮಾರ್ ಶೆಟ್ಟಪ್ಪನವರ್ ೫೪ ವರ್ಷ ವಯಸ್ಸು ಎಂದು ಗುರುತಿಸಲಾಗಿದೆ.

ಇಂಡಿಕೇಟರ್ ಮತ್ತು ಬ್ರೇಕ್ ಲೈಟ್‌ ಹಾಕದೇ ಲಾರಿ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೃತ ಉಪತಹಶೀಲ್ದಾರ ವಿಜಯಕುಮಾರ್ ಕಚೇರಿ ಕೆಲಸ ಮುಗಿಸಿಕೊಂಡು ಮುಂಡಗೋಡದಿಂದ ತಮ್ಮ ಕಲಘಟಗಿಗೆ ಹೋಗುತ್ತಿದ್ದರು ಎನ್ನಲಾಗಿದೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!