June 22, 2021

ರೈಲು ತಡೆಯಲು ಬಂದ ರೈತರನ್ನು, ವಶಕ್ಕೆ ಪಡೆದ ಪೊಲೀಸರು

ಹಾವೇರಿ – ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ ರೈಲು ತಡೆ ಚಳುವಳಿ ಮಾಡಲು ಬಂದ ರೈತರನ್ನ ರೈಲು ನಿಲ್ದಾಣದ ಹೊರಗೆ ನಿಲ್ಲಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಚಂದ್ರಶೇಖರ ಕೊಡಿಹಳ್ಳಿ ಬಣದ ರೈತ ಸಂಘದ ಕಾರ್ಯಕರ್ತರು ರೈಲ್ವೆ ನಿಲ್ದಾಣದ ಒಳಗೆ ಪ್ರಯತ್ನಿಸಿದರು. ಅದರೆ ರೈಲ್ವೆ ಪೊಲೀಸ್ ಸಿಬ್ಬಂದಿ ಹಾಗೂ ನಗರಪೊಲೀಸರು ಒಳಗೆ ಹೋಗುವುದನ್ನ ತಡೆದು ನಿಲ್ಲಿಸಿದರು.

ರೈತರು ನಿಲ್ದಾಣ ಹೊರಗೆ ನಿಂತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮೂರು ಕೃಷಿ ಕಾಯ್ದೆ ಸರ್ಕಾರ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.ರೈಲ್ವೆ ನಿಲ್ದಾಣದ ಹೊರಗಡೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡರು. ಪ್ರತಿಭಟನೆ ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು

______

Share this News
error: Content is protected !!