March 7, 2021

ಡಿಪೋ ಮುಂದೆ ಏಕಾಏಕಿ ವಿದ್ಯಾರ್ಥಿಗಳ ಪ್ರತಿಭಟನೆ

ಹಾನಗಲ್ – ವಿದ್ಯಾರ್ಥಿಗಳು ಹೆಚ್ಚುವರಿ ಬಸ್ ಬಿಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಬಸ್ ಡಿಪೋ ಮುಂದೆ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

ಹಾನಗಲ್ ಪಟ್ಟಣದಿಂದ ಬೊಮ್ಮನಹಳ್ಳಿ ಗ್ದಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಸರಿಯಾದ ಸಮಯಕ್ಕೆ ಕಾಲೇಜ್ ಗೆ ಬರಲು ಆಗುತ್ತಿಲ್ಲ. ಬಸ್ ನಲ್ಲಿ ಸೀಟು ,ಅಲ್ಲದೆ ಬಸ್ ನಲ್ಲಿ ವಿದ್ಯಾರ್ಥಿಗಳು ಜೋತು ಬಿದ್ದು ಬರುವ ಪರಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ  ನಿನ್ನೆ ಬಾಟಲಿ ತಗೊಂಡು ಬಂದಿದ್ರು, ಇವತ್ತು ಹಲಗಿ ಬಡಿದರು..

ಬೆಳಗ್ಗೆ, 8 ಗಂಟೆ, 8-30, ಹಾಗೂ 9 ಗಂಟೆ ಬಸ್ ಬರುವ ವ್ಯವಸ್ಥೆ ಆಗಬೇಕು, ಸಂಜೆ ಕಾಲೇಜು ಮರಳಿಗೆ ಹೋಗಲು 4 ಗಂಟೆ 4-30 ಗಂಟೆ, 5 ಗಂಟೆ ಹಾಗೂ 5-30 ಕ್ಕೆ ಬಸ್ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಸಾರಿಗೆ ವ್ಯವಸ್ಥಾಪಕರಲ್ಲಿ ಮನವಿ ಮಾಡಿಕೊಂಡರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!