March 7, 2021

ಕಳೆದುಕೊಂಡಿದ್ದ ಕರುಳಬಳ್ಳಿಯನ್ನು ಒಂದುಗೂಡಿಸಿದ ಬ್ಯಾಡಗಿ ಪಿ.ಎಸ್.ಐ ಮಹಾಂತೇಶ ಮತ್ತು ಸಿಬ್ಬಂದಿ

ಹಾವೇರಿ-  ಜಿಲ್ಲೆಯ ಹಾವೇರಿ ತಾಲೂಕಿನ ಸುಪ್ರಿಸಿದ್ಧ ಹಾವನೂರು ದ್ಯಾಮವ್ವನ ಜಾತ್ರೆಯಲ್ಲಿ ಮನ ಮಿಡಿಯುವ ಘಟನೆಯೊಂದು ನಡೆದಿದೆ.

ಎಂಟು ವರ್ಷದ ಬಾಲಕಿ ಅಂಜನಾ ಪುತ್ರಪ್ಪ ಗಂಟಿಚೋರ ಎಂಬುವಳು ಜಾತ್ರೆಯ ಜನಜಂಗುಳಿಯಲ್ಲಿ ಆಕಸ್ಮಿಕವಾಗಿ ತಾಯಿಯಿಂದ ತಪ್ಪಿಸಿಕೊಂಡಿದ್ದಾಳೆ. ಇದ್ದರಿಂದ ಕೆಲಗಂಟೆಗಳ ಕಾಲ ತಾಯಿ ಮತ್ತು ಮಗಳು ದೂರವಾಗಿದ್ದು, ಎರಡು ಜೀವಗಳು ಕಣ್ಣೀರು ಹಾಕಿವೆ.

ಇದನ್ನೂ ಓದಿ  ಫೆ.24 ರಂದು ಕೋವಿಡ್ ಮುನ್ನೆಚ್ಚರಿಕೆ ಕ್ರಮದೊಂದಿಗೆ ಪ್ರವೇಶ ಪರೀಕ್ಷೆಗೆ ಸೂಚನೆ -ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಈ ಸಂದರ್ಭ ಜಾತ್ರಾ ನಿಮಿತ್ತ ಕರ್ತವ್ಯಕ್ಕೆ ಹೋಗಿದ್ದ ಬ್ಯಾಡಗಿ ಪಿಎಸ್ ಐ ಮಹಾಂತೇಶ್ ಮತ್ತು ಅವರ ವಾಹನದ ಚಾಲಕರು, ಕಾನ್ಸಸ್ಟೇಬಲ್ ಹನುಮಂತ ಸುಂಕದ ಅವರ ಬಳಿ ಬಾಲಕಿ ಸಿಕ್ಕಿದ್ದು, ತಕ್ಷಣಕ್ಕೆ ಕಾರ್ಯ ಪ್ರವೃತ್ತರಾದ ಪಿಎಸ್ ಐ ಬಾಲಕಿಯಿಂದ ತಂದೆ ಹೆಸರು ಹಾಗೂ ಊರಿನ ಹೆಸರು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ  HAVERI|ಬೆಲೆ ಏರಿಕೆ ವಿರುದ್ಧ ಸೈಕಲ್ ಗೆ ಸಿಲಿಂಡರ್ ಕಟ್ಟಿ ಜೆಡಿಎಸ್ ಪ್ರತಿಭಟನೆ

ನಂತರ ಕೊಪ್ಪಳಕ್ಕೆ ಕರೆ ಮಾಡಿ ಬಾಲಕಿಯ ಗ್ರಾಮವಾದ ಹಿರೇಬೊಮ್ಮನಹಳ್ಳಿಯಲ್ಲಿ ಬಾಲಕಿ ತಂದೆಯ ನಂಬರ್ ಪಡೆದುಕೊಂಡಿದ್ದು, ನಿಮ್ಮ ಮಗಳು ನಮ್ಮ ಬಳಿ ಇರುವುದಾಗಿ ತಂದೆಗೆ ತಿಳಿಸಿದ್ದಾರೆ.ನಂತರ ಪೊಲೀಸ್ ಬಳಿ ಅವರ ತಾಯಿ ಬಂದು ಮಗಳನ್ನು ಕರೆದುಕೊಂಡು ಹೋಗಿದ್ದು, ಪೊಲೀಸರ್ ಮಾನವೀಯ ಕಾರ್ಯಕ್ಕೆ ಧನ್ಯವಾದ ತಿಳಿಸಿದ್ದಾಳೆ.

ಇದನ್ನೂ ಓದಿ  ಪುಲ್ವಾಮ್ ಹುತಾತ್ಮರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಅಗಡಿ ಗ್ರಾಮದ ಯುವಕರು

ಜಾತ್ರೆಯ ಸಂಭ್ರಮದಲ್ಲಿ ಕಳೆದುಕೊಂಡಿದ್ದ ತಾಯಿ-ಮಗಳನ್ನು ಒಂದಾಗಿಸಿದ ಪೊಲೀಸ್ ಪಡೆ ಕೂಡ ಭಾವುಕವಾಗಿತ್ತು..

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!