June 22, 2021

ಪ್ರತಿ ವರ್ಷದಂತೆ ಮೈಲಾರ ಕಾರ್ಣೀಕೋತ್ಸವಕ್ಕೆ ಎಲ್ಲ ಭಕ್ತರಿಗೂ ಅನುಮತಿ ನೀಡಬೇಕು.ಜಿಲ್ಲಾಧಿಕಾರಿಗಳಿಗೆ ಯೂತ್ ಕಾಂಗ್ರೇಸ್ ಮನವಿ

ಹಾವೇರಿ- ಪ್ರತಿ ವರ್ಷದಂತೆ ಸುಕ್ಷೇತ್ರ ಮೈಲಾರದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ಎಲ್ಲ ಭಕ್ತರಿಗೂ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಗುತ್ತಲ ಹೋಬಳಿಯ ಯೂಥ್ ಕಾಂಗ್ರೆಸ್ ವತಿಯಿಂದ ಕಂದಾಯ ನಿರೀಕ್ಷಕ ಅಧಿಕಾರಿಗಳು ಇವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು,

ಕೋವಿಡ್-19 ನೆಪವೊಡ್ಡಿ ಮೈಲಾರ ಜಾತ್ರೆಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಹೇಯ ಕೃತ್ಯ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ, ಮುಜರಾಯಿ ಸಚಿವರು ಈ ಬಗ್ಗೆ ತಕ್ಷಣವೇ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ನಿರ್ಬಂಧ ಹೇರಿರುವದನ್ನು ಹಿಂಪಡೆಯಲು ಸೂಚಿಸಬೇಕು ಬೈ ಎಲೆಕ್ಷನ್ ರಾಜಕೀಯ ಸಮಾವೇಶ, ಸಮಾರಂಭಗಳಿಗೆ ಅನುಮತಿ ನೀಡುವ ಅಧಿಕಾರಿಗಳು ಜಾತ್ರೆಗೆ ನಿರ್ಬಂಧ ಮಾಡಿರುವದು ಸರಿಯಲ್ಲ ಜಾತ್ರೆಗೆ ಎಲ್ಲ ಭಕ್ತರಿಗೂ ಮುಕ್ತ ಅವಕಾಶ ನೀಡಬೇಕೆಂದು ಒತ್ತಾಯಿಸಿ ಯುವ ಕಾಂಗ್ರೆಸ್ ಮುಖಂಡ ಸಂಜಯಗಾಂಧಿ ಪು ಸಂಜೀವಣ್ಣನವರ
ಅಜಯ ಬಂಡಿವಡ್ಡರ ಕರ್ಜಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ರಾಜಾಸಾಬ್ ಹುಬ್ಬಳ್ಳಿ ಮಂಜು ದೊಡ್ಡೂರು ಅಜ್ಜಯ್ಯ ಮಲೇಣ್ಣನವರ ಚಂದ್ರು ತಳವಾರ ವಾಸು ಜೋಗಮ್ಮನವರು ಈ ಕಾರ್ಯಕ್ರಮದಲ್ಲಿ ಇನ್ನೂ ಮುಂತಾದವರು ಭಾಗವಹಿಸಿದ್ದರು.

Share this News
error: Content is protected !!