March 7, 2021

ನವ ವಧುವಿನಂತೆ ಸಿಂಗಾರಗೊಂಡಿದೆ ಹೊಸನೀರಲಗಿ ಗ್ರಾಮ.‌ ಯಾಕೆ ಅಂತೀರಾ ಈ ಸುದ್ದಿ ಓದಿ

ಜಿಲ್ಲಾಡಳಿತ ಸ್ವಾಗತಕ್ಕೆ ಹೊಸನೀರಲಗಿ ಗ್ರಾಮ ಸಜ್ಜು – ಹಲವು ಸಮಸ್ಯೆ ನಿವಾರಣೆ ನಿರೀಕ್ಷೆ

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ಅಧಿಕಾರಿಗಳ ತಂಡದಿಂದ ಗ್ರಾಮ ವಾಸ್ತವ್ಯ

ಹಾವೇರಿ:: ಜನರ ಸಮಸ್ಯೆಗಳ ಆಲಿಸಿ ಅವರ ಮನೆ ಅಂಗಳದಲ್ಲಿ ಸಮಸ್ಯೆಗಳ ನಿವಾರಣೆಯ ಬಹು ನಿರೀಕ್ಷಿತ “ಹಳ್ಳಿಯ ಕಡೆಗೆ ಜಿಲ್ಲಾಧಿಕಾರಿಗಳ ನಡಿಗೆ” ಮೊದಲ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಫೆಬ್ರುವರಿ 20 ರ ಶನಿವಾರ ಸವಣೂರ ತಾಲೂಕಿನ ಹೊಸನೀರಲಗಿ ಗ್ರಾಮದಲ್ಲಿ ಜರುಗಲಿದೆ.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಗ್ರಾಮ ವಾಸ್ತವ್ಯ ಆರಂಭಮಾಡಿ ರಾತ್ರಿ ಅದೇ ಗ್ರಾಮದಲ್ಲಿ ತಂಗಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಗ್ರಾಮ ಪ್ರವೇಶ, ಪರಿಶಿಷ್ಟ ವರ್ಗದ ಕಾಲೋನಿ ಭೇಟಿ, ಚಹಾ ಸೇವನೆ, ನಂತರ ಕಾರ್ಯಕ್ರಮ ನಡೆಯುವ ಶಾಲೆಯಲ್ಲಿ ಕಾರ್ಯಕ್ರಮದ ಉದ್ಘಾಟನೆ, ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಮಧ್ಯಾಹ್ನ ಊಟ, ಸಾರ್ವಜನಿಕ ಅಹವಾಲು ನಂತರ ಅಂಗನವಾಡಿ, ಶಾಲೆಗಳಿಗೆ ಭೇಟಿ, ರಾತ್ರಿ ವಾಸ್ತವ್ಯ ಹೂಡುವುದರ ಮೂಲಕ ಹೊಸನೀರಲಗಿ ಗ್ರಾಮದ ಹಲವು ಸಮಸ್ಯೆಗಳ ನಿವಾರಣೆಯತ್ತ ಗಮನಹರಿಸಲಿದ್ದಾರೆ. ಗ್ರಾಮದ ಸಾರ್ವಜನಿಕ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕುರಿತಂತೆ ಖುದ್ದು ಪರಿಶೀಲನೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸವಣೂರ ತಾಲೂಕಾ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ  ಫೆ.24 ರಂದು ಕೋವಿಡ್ ಮುನ್ನೆಚ್ಚರಿಕೆ ಕ್ರಮದೊಂದಿಗೆ ಪ್ರವೇಶ ಪರೀಕ್ಷೆಗೆ ಸೂಚನೆ -ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ


ಸ್ವಾಗತಕ್ಕೆ ಸಜ್ಜು: ಸವಣೂರ ತಾಲೂಕಿನ ಹೊಸ ನೀರಲಗಿ ಗ್ರಾಮ ಅಧಿಕಾರಿಗಳ ಸ್ವಾಗತಕ್ಕೆ ಸಜ್ಜಾಗಿದೆ. ಗ್ರಾಮ ವಾಸ್ತವ್ಯ ನಡೆಸುವ ಸರ್ಕಾರಿ ಪ್ರಾಥಮಿಕ ಶಾಲೆ ಆವರಣ ಶೃಂಗಾರಗೊಳ್ಳುತ್ತಿದೆ. ನೆರಳು, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕರ ಅರ್ಜಿಗಳ ಸ್ವೀಕಾರಕ್ಕೆ ಡೆಸ್ಕ್‍ಗಳ ವ್ಯವಸ್ಥೆ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರಗಳ ನೇತೃತ್ವದಲ್ಲಿ ಸಿದ್ಧತೆಯನ್ನು ಪೂರ್ಣಗೊಳಿಸಲಾಗಿದೆ.
1673 ಜನ ಸಂಖ್ಯೆಹೊಂದಿರುವ ಈ ಗ್ರಾಮದಲ್ಲಿ 1188 ಮತದಾರರಿದ್ದಾರೆ. ಪ್ರಾಥಮಿಕ ಶಿಕ್ಷಣ ಮಾತ್ರ ಪಡೆಯಲು ಅವಕಾಶ ಇರುವ ಈ ಗ್ರಾಮದಲ್ಲಿ 15 ಪರಿಶಿಷ್ಟ ಜಾತಿ, 37 ಪರಿಶಿಷ್ಟ ವರ್ಗ, 137 ಅಲ್ಪಸಂಖ್ಯಾತ ಸಮುದಾಯ, 176 ಸಾಮಾನ್ಯ ವರ್ಗದ ಕುಟುಂಬ ಸೇರಿದಂತೆ 360 ಕುಟುಂಬಗಳು ವಾಸಮಾಡುತ್ತಿವೆ. ಈ ಗ್ರಾಮದಲ್ಲಿ ಇ-ಸ್ವತ್ತು ದಾಖಲೆ, ಶಾಲಾ ಕಟ್ಟಡ ದುರಸ್ಥಿ, ರಸ್ತೆ ದುರಸ್ಥಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಯ ನಿರೀಕ್ಷೆಯಲ್ಲಿ ಜನರು ಇದ್ದಾರೆ.

ಇದನ್ನೂ ಓದಿ  ಅಪಘಾತದ ರಭಸಕ್ಕೆ ಹೊತ್ತಿ ಉರಿದ ಕಾರು ಮತ್ತು ಟಿಪ್ಪರ್

ಎಲ್ಲೆಲ್ಲಿ ಗ್ರಾಮ ವಾಸ್ತವ್ಯ: ಇದೇ ದಿನ ಜಿಲ್ಲೆಯ ಉಳಿದ ಏಳು ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ತಾಲೂಕಾ ದಂಡಾಧಿಕಾರಿಗಳಾದ ತಹಶೀಲ್ದಾರ ನೇತೃತ್ವದಲ್ಲಿ ಆಯಾ ತಾಲೂಕಾ ವಿವಿಧ ಇಲಾಖಾ ಅಧಿಕಾರಿಗಳು ಗ್ರಾಮ ವಾಸ್ತವ್ಯ ಕೈಗೊಂಡು ಬೆಳಗಿನಿಂದ ಸಂಜೆಯವರೆಗೆ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ಹಾವೇರಿ ತಾಲೂಕಿನ ಕೋಳೂರ, ಹಿರೇಕೆರೂರು ತಾಲೂಕು ಕೋಡ ್ಲ, ರಾಣೇಬೆನ್ನೂರ ತಾಲೂಕು ಖಂಡೇರಾಯನಪುರ, ಬ್ಯಾಡಗಿ ತಾಲೂಕು ಬಿಸಲಹಳ್ಳಿ, ರಟ್ಟಿಹಳ್ಳಿ ತಾಲೂಕು ಲಿಂಗದೇವರಕೊಪ್ಪ, ಶಿಗ್ಗಾಂವ ತಾಲೂಕು ಮಮದಾಪುರ, ಹಾನಗಲ್ ತಾಲೂಕು ಮಕರವಳ್ಳಿ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಲಿದ್ದು, ಸಾರ್ವಜನಿಕರ ದೂರು, ದುಮ್ಮಾನಗಳ ಆಲಿಕೆ ಹಾಗೂ ಪರಿಹಾರ ಕಾರ್ಯಗಳು ಜರುಗಲಿವೆ.
ಯಾವುದಕ್ಕೆ ಪರಿಹಾರ: ಜಮೀನುಗಳ ಸವೇ ಹದ್ದುಬಸ್ತು, ಪೋಡಿ, ವೃದ್ಧಾಪ್ಯ ವೇತಮ, ವಿಧಾವಾ ವೇತನ, ವಿಶೇಷಚೇತನರ ವೇತನಕ್ಕೆ ಸಂಬಂಧಿಸಿದ ದೂರುಗಳ ನಿವಾರಣೆ, ಪೋತಿವಾರಸು ಹಕ್ಕು ಬದಲಾವಣೆ, ಪಡಿತರ ಚೀಟಿ ವಿತರಣೆ, 11ಇ ನಕ್ಷೆ ತಿದ್ದುಪಡಿ, 94 ಸಿ ಅಡಿ ಪ್ರಕರಣಗಳ ವಿಲೇವಾರಿ, ಸರ್ಕಾರಿ ಜಮೀನು ಒತ್ತುವರಿ ಹಾಗೂ ಕೆರೆ ಒತ್ತುವರಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ, ಪ್ರವಾಹ ಪರಿಹಾರ ಸಮಸ್ಯೆಗಳ ಪರಿಹಾರ ಒಳಗೊಂಡಂತೆ ಹಲವು ನಾಗರಿಕ ಸಮಸ್ಯೆಗಳಿಗೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದೆ.
ನೀಡಲಾಗುವುದು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!