June 22, 2021

ಆರೋಗ್ಯ ಸಂಪತ್ತು ಎಲ್ಲ ‌ಸಂಪತ್ತುಗಳಿಗಿಂತಲೂ ಮಿಗಿಲು – ವಿ.ಎಚ್.ಕೆ. ಹಿರೇಮಠ

ಹಾವೇರಿ- ಭೌತಿಕ ಬದುಕಿನಲ್ಲಿ ಮನುಷ್ಯನಿಗೆ ಎಲ್ಲ ಸಂಪತ್ತುಗಳಿಗಿಂತಲೂ ಆರೋಗ್ಯ ಸಂಪತ್ತು ಎಲ್ಲಕ್ಕಿಂತಲೂ ಮಿಗಿಲು ಎಂದು ಸಿಂದಗಿ ಶಾಂತವೀರೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯ-ಆಸ್ಪತ್ರೆಯ ಆಡಳಿತಾಧಿಕಾರಿ ವಿ.ಎಚ್.ಕೆ. ಹಿರೇಮಠ ಹೇಳಿದರು.

 

ಅವರು ಜಿಲ್ಲೆಯ ಸವಣೂರ ತಾಲೂಕಿನ ಹಲಸೂರು ಗ್ರಾಮದಲ್ಲಿ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಮನುಷ್ಯನ ಜೀವನದಲ್ಲಿ ಆರೋಗ್ಯ ಭಾಗ್ಯವು ಎಲ್ಲರಿಗೂ ದೊರಕುವಂತಾಗಬೇಕು. ಭಾರತೀಯ ಪರಂಪರೆಯಲ್ಲಿ ಆರೋಗ್ಯದ ಹಿತದೃಷ್ಠಿಯಿಂದ ಅನೇಕ ವನಸ್ಪತಿಗಳಿರುವ ಸಸ್ಯರಾಶಿ ಎಲ್ಲೆಡೆ ಹರಡಿಕೊಂಡಿದ್ದು ಅವುಗಳ ಸರಿಯಾದ ಸದ್ಭಳಕೆಯಿಂದ ಮತ್ತು ಅಭಿವೃದ್ಧಿಯಿಂದ ದೇಶವಾಸಿಗಳ ಆರೋಗ್ಯ ಉತ್ತಮಗೊಳ್ಳಲಿದೆ. ಗ್ರಾಮಮಟ್ಟದಿಂದ ಹಿಡಿದು ನಗರ ಪ್ರದೇಶಗಳಲ್ಲಿ ಉಚಿತ ಚಿಕಿತ್ಸಾ ಶಿಬಿರಗಳು ಆಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಂಡು ಆರೋಗ್ಯಪೂರ್ಣ ಪರಿಸರವನ್ನು ನಿರ್ಮಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.

ತವರಮೆಳ್ಳಿಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಕುಬೇರಪ್ಪ ಕೊಪ್ಪದ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಪರಿಸರದ ಕುರಿತು ಜಾಗೃತಿ ಮೂಡಿಸಿ ಉತ್ತಮ ವಾತಾವರಣ ನಿರ್ಮಿಸುವುದು ಎಲ್ಲರ ಹೊಣೆಯಾಗಿದೆ. ದೇಶ ಕಟ್ಟುವ ಮುನ್ನ ನಾವು ನಮ್ಮಗಳ ಮನಸ್ಸನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಮ್. ಎಸ್. ಯರಗೊಪ್ಪ ಮಾತನಾಡಿ ನಮ್ಮ ಮಹಾವಿದ್ಯಾಲಯ ಶಿಕ್ಷಣದ ಜೊತೆ ಜೊತೆಗೆ ಸಾಮಾಜಿಕ ಕಾಳಜಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಿರಂತರ ಕಾರ್ಯ ಮಾಡಿಕೊಂಡು ಬರುತ್ತಿದೆ. ಸಮೃದ್ಧ ಆರೋಗ್ಯದ ಹಕ್ಕು ಎಲ್ಲರದೂ ಇದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ನಾಗಪ್ಪ ಆಡೂರ, ಗ್ರಾ.ಪಂ. ಸದಸ್ಯರಾದ ಪ್ರಶಾಂತ ಕ್ಷತ್ರೀಯ, ಗುರಪ್ಪ ಅಕ್ಕಿ, ಸಂತೋಷ ಅಣ್ಣಿಗೇರಿ, ಯಲ್ಲಪ್ಪ ನಿಂಬಕ್ಕನವರ, ನಾಗರಾಜ ಕುರಗೋಡಿ, ವಿ. ಎಮ್. ಓಂಕಾರಣ್ಣವರ, ಕೆ. ಎಫ್. ಸಾಲಿ, ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ. ಎಸ್. ವಿ. ಮಡವಾಳೆ, ಯುಬಿಎನ ಪ್ರೊ. ಬಿ. ಎಮ್. ಮಲ್ಲಿಕಾರ್ಜುನಪ್ಪ, ಡಾ. ಸಿ. ಮಲ್ಲಣ್ಣ, ರೆಡ್‍ಕ್ರಾಸ್‍ನ ಪ್ರೊ. ಎಚ್.ಐ.ಖತೀಬ, ಪ್ರೊ. ಜಿ. ಕೆ. ಮಂಕಣಿ, ಎನ್.ಸಿ.ಸಿ. ಲೆಫ್ಟಿನೆಂಟ್ ಬಿ. ಎಮ್. ಲೋಕಾಪೂರ, ಎನ್.ಎಸ್.ಎಸ್‍ನ ಪ್ರೊ. ಆರ್.ಸಿ. ನಾಯ್ಕ್, ಪ್ರೊ. ಎಸ್. ಎಸ್. ಸಣ್ಣಶಿವಣ್ಣವರ, ಸ್ಕೌಟ್ಸ್&ಗೈಡ್ಸ್‍ನ ಡಾ. ಎಮ್.ಪಿ.ಕಣವಿ, ಪ್ರೊ. ಕೆ. ಎಚ್. ಬ್ಯಾಡಗಿ ಉಪಸ್ಥಿತರಿದ್ದರು.

ಡಾ. ಸಂಗಮೇಶ್ ನೇತೃತ್ವದ ತಂಡದಲ್ಲಿ ಡಾ. ವೀರಣ್ಣ, ಡಾ. ಕವಿತಾ ಸಿ. ಎಮ್., ಡಾ. ತರಂಗಿಣಿ ಹಾಗೂ ಸಹಾಯಕ ವೈದ್ಯರು ಪಾಲ್ಗೊಂಡು 240 ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು. ನ್ಯಾಕ್ ಸಂಯೋಜಕ ಡಾ. ಬಿ. ಎನ್. ವಾಸುದೇವನಾಯ್ಕ್ ಸ್ವಾಗತಿಸಿದರು. ಡಾ. ಗುರುಪಾದಯ್ಯ ವೀ. ಸಾಲಿಮಠ ನಿರೂಪಿಸಿದರು. ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಡಿ. ಎ. ಕೊಲ್ಲಾಪುರೆ ಸ್ವಾಗತಿಸಿದರು.

Share this News
error: Content is protected !!