February 25, 2021

ನೋಡು ನೋಡುತ್ತಿದ್ದಂತೆಯೇ 20ಎಕರೆ ಮೆಕ್ಕೆಜೋಳ ಸುಟ್ಟು ಭಸ್ಮವಾಯಿತು. ಕಾರಣವೇನು..?

ಹಾವೇರಿ – ಆಕಸ್ಮಿಕ ಬೆಂಕಿ ಬಿದ್ದು ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಣಕೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ರಂಗಪ್ಪ ಕಂಬಳಿಯವರ ಎಂಬುವರಿಗೆ ಸೇರಿದ ಮೆಕ್ಕಜೋಳ ರಾಶಿ. ಕಟಾವು ಮಾಡಿ ರಾಶಿ ಮಾಡಲು ಹಾಕಿದ್ದ ತೆನೆಗಳು ಸುಟ್ಟು ಕರಕಲಾಗಿವೆ.

ಇದನ್ನೂ ಓದಿ  ಬೈಕ್ ಗೆ ಟಿಪ್ಪರ್ ಡಿಕ್ಕಿ- ಸ್ಥಳದಲ್ಲೆ ನಾಲ್ವರು ಸಾವು

ಇಪ್ಪತ್ತು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಸುಟ್ಟ ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸೋವಷ್ಟರಲ್ಲಿ ಸುಟ್ಟು ಹೋಗಿವೆ. ಸುಮಾರು ಐದು ಲಕ್ಷ ರುಪಾಯಿ ಮೌಲ್ಯದ ಮೆಕ್ಕೆಜೋಳ ಹಾನಿಯಾಗಿದೆ.
ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ  RANEBENNURU | ರಾಣೇಬೆನ್ನೂರು ಹುಲಿಗೆ ಭಾವಪೂರ್ಣ ಶ್ರದ್ದಾಂಜಲಿ | RANEBENNURU

_____

Share this News
error: Content is protected !!