June 22, 2021

ಅಪಘಾತದ ರಭಸಕ್ಕೆ ಹೊತ್ತಿ ಉರಿದ ಕಾರು ಮತ್ತು ಟಿಪ್ಪರ್

ರಸ್ತೆ ಮಧ್ಯೆಯೇ ಹೊತ್ತಿ ಊರಿದ ಕಾರು- ಟಿಪ್ಪರ್‌
____
ದಾವಣಗೆರೆ – ಟಿಪ್ಪರ್ ಲಾರಿ ಹಾಗೂ ಕಾರ್ ಮಧ್ಯೆ ಅಪಘಾತ ಸಂಭವಿಸಿ, ರಾಷ್ಟ್ರೀಯ ಹೆದ್ದಾರಿ ೪ ರಲ್ಲಿಯೇ ಧಗಧಗನೆ ಹೊತ್ತಿ ಉರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ನಗರದ ಹೊರವಲಯದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ 4 ರ ಬೈಪಾಸ್‌ನಲ್ಲಿ ಈ ಘಟನೆ ನಡೆದಿದೆ. ಕಾರು ಬೆಂಗಳೂರಿನಿಂದ ಹುಬ್ಬಳ್ಳಿ ಕಡೆ ಸಾಗುತ್ತಿತ್ತು. ಈ ವೇಳೆ ಟಿಪ್ಪರ್ ಲಾರಿ ದಾವಣಗೆರೆಯ ಕಡೆಗೆ ರಸ್ತೆ ಕ್ರಾಸ್ ಆಗುತ್ತಿತ್ತು. ಆಗ ಎರಡು ವಾಹನಗಳ ನಡುವೆ‌ ಅಪಘಾತ ನಡೆದಿದೆ.‌ ಅಪಘಾತದ ರಭಸಕ್ಕೆ ಎರಡು ವಾಹನಗಳು ಹೊತ್ತಿ‌ ಉರಿದು ಹೋಗಿವೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ದಾವಣಗೆರೆ ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ‌‌

_____

Share this News
error: Content is protected !!