ಕೊರೋನಾ ಹೆಚ್ಚಳ ,ಸವದತ್ತಿ ಎಲ್ಲಮ್ಮ ದೇವಿಯ ಹಾಗೂ ಚಿಂಚಲಿ ಮಾಯಕ್ಕ ದೇವಾಲಯಕ್ಕೆ ಭಕ್ತರ ನಿರ್ಬಂಧ.
________
ಬೆಳಗಾವಿ – ಪಕ್ಕದ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಮತ್ತೆ ಕೊರೋನಾ ಮಹಾಮಾರಿಯ ಸದ್ದು ಹೆಚ್ಚಾಗುತ್ತಿದೆ. ಇದರಿಂದ ಬೆಳಗಾವಿ ಜಿಲ್ಲಾಡಳಿತ ರಾಜ್ಯ ಹಾಗೂ ಹೊರರಾಜ್ಯದ ಲಕ್ಷಾಂತರ ಭಕ್ತರನ ಹೊಂದಿರುವ ಸವದತ್ತಿ ಯಲ್ಲಮ್ಮನ ಹಾಗೂ ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೆ ಭಕ್ತರ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಮಾಡಿದ್ದಾರೆ.
ರಾಯಬಾಗ ತಾಲ್ಲೂಕಿನ ಚಿಂಚಲಿ ಮಾಯಕ್ಕ ದೇವಿಯ ದೇವಸ್ಥಾನಕ್ಕೆ ಬರುವ ಭಕ್ತರು ದೇವಿಯ ದರ್ಶನಕ್ಕೆ ಬಾರದಂತೆ ನಿಷೇಧ ಮಾಡಿದ್ದಾರೆ. ಮಹಾರಾಷ್ಟ್ರ ಗಡಿ ಭಾಗದ ಹೆಚ್ಚು ಭಕ್ತರು ಇರುವ ಎರಡು ದೇವಸ್ಥಾನಕ್ಕೆ ಭಕ್ತರ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶ ನೀಡಿದೆ. ಮತ್ತೆ ಮಹಾರಾಷ್ಟ್ರ ಭಾಗದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ.ಮುಂದಿನ ಅದೇಶದ ಅವರಿಗೆ ದೇವರ ದರ್ಶನ ಭಾಗ್ಯ ಭಕ್ತರಿಗೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
More Stories