ಹಾವೇರಿ – ಹಾವೇರಿ ನಗರಸಭೆ ಕಾರ್ಯಾಲದಲ್ಲಿ 2020/21 ನೇ ಸಾಲಿನ ಆಯ-ವಯ್ಯ ತಯಾರಿಕೆ ಕುರಿತು ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ನಗರಸಭೆಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು
ನಗರ ವ್ಯಾಪ್ತಿಯಲ್ಲಿ ಬರುವ ವಿವಿಧ ಸ್ಲಂ ಜೋನ್ ಗಳಲ್ಲಿ ಕಿತ್ತುಹೋಗಿರುವ ರಸ್ತೆಗಳ ಅಭಿವೃದ್ಧಿ, ಹೊಸ ಚರಂಡಿ ಮತ್ತು ಸಿ.ಡಿ ನಿರ್ಮಿಸುವುದು.
ಹೊಸ ಪೈಪ್ ಲೈನ್ ಸಂಪರ್ಕ, ಪಂಪ್ ಸೆಟ್ ಖರೀದಿ,ಕಚ್ಚಾ ಚರಂಡಿ ನಿರ್ಮಾಣ ಹಾಗೂ ಚರಂಡಿ ದುರಸ್ತಿ, ನಗರ ನೈರ್ಮಲ್ಯೀಕರಣ, ನೀರು ಸರಬರಾಜು ಸಾಮಗ್ರಿ, ಬೀದಿ ದೀಪ ಖರೀದಿ ಮತ್ತು ಅಳವಡಿಕೆ, ಸಾರ್ವಜನಿಕ ಉದ್ಯಾನಗಳ ಅಭಿವೃದ್ಧಿ ಹಾಗೂ ಸ್ವಚ್ಛತೆ ಕಾಪಾಡುವುದು, ಎಸ್ ಎಸ್ಟಿ ಕಾಲೋನಿಗಳ ಜನರ ಅಭಿವೃದ್ದಿ, ಮೋಟರ್ ದುರಸ್ತಿ, ಕಚ್ಚಾ ರಸ್ತೆಗಳಿಗೆ ಡಾಂಬರೀಕರಣ ಸ್ಪರ್ಶ, ವಿವಿಧ ಫಲಾನುಭವಿಗಳಿಗೆ ವೇತನ ಅನುದಾನವನ್ನು ಸಮರ್ಪಕವಾಗಿ ಸದ್ಛಳಕೆ ಮಾಡುವುದು ಸೇರಿದಂತೆ ಪ್ರಮುಖ ಮೂಲಭೂತ ಸೌಕರ್ಯಗಳು ಸಾರ್ವಜನಿಕರಿಗೆ ಸಮರ್ಪ ಕವಾಗಿ ಒದಗಿಸಲು ಬೇಕಾದ ಎಲ್ಲ ರೀತಿಯ ಅನುದಾನದ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದರು.
ಈ ಆಯ- ವ್ಯಯ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷರು ಜಾಹೀದಾಭಾನು ಜಮಾದಾರ,ನಗರಸಭೆ ಪೌರಾಯುಕ್ತರು ಶ್ರೀ ಪಿ.ಎಂ ಚಲವಾದಿ ಅವರು ನಗರ ಸಭಾ ಸದಸ್ಯರುಗಳು ನಗರ ಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
More Stories
ಗುಡ್ ನ್ಯೂಸ್, ಫೆ.28 ರಂದು ಕೆ.ಪಿ.ಎಸ್ಸಿ ಎಫ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆ- ಪ್ರವೇಶ ಪತ್ರ ಡೌನ್ಲೋಡ್ಗೆ ಸೂಚನೆ.
ಬಿಪಿಎಲ್ ಪಡಿತರ ಚೀಟಿ ಹಿಂತಿರುಗಿಸಿ, ಇಲ್ಲಾಂದ್ರೆ ಕ್ರಿಮಿನಲ್ ಕೇಸ್.!?
ಆದರ್ಶ ವ್ಯಕ್ತಿಗಳ ಬದುಕು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ – ರವಿಕುಮಾರ ಪೂಜಾರ್