ಕಾಲಿನಲ್ಲಿ ಹುಳ್ಳು ಬಿದ್ದು ಒತ್ತಾಡುತ್ತಿದ್ದ ವೃಯೋದನನ್ನ ಆಸ್ಪತ್ರೆ ಸೇರಿದ ಸಮಾಜಸೇವಕ.
_______
ಹಾವೇರಿ – ಆ ವೃದ್ಧ ಕಳೆದ ೨೫ ದಿನಗಳಿಂದ ಮನೆ ಬಿಟ್ಟು ಬಂದಿದ್ದ. ಮಕ್ಕಳ ಮನೆಗೆ ಹೋಗದೆ ಬೀದಿ ಬದಿಯಲ್ಲಿ ವಾಸವಾಗಿದ್ದ. ಹೀಗೆ ಬೀದಿ ಬದಿಯಲ್ಲಿಯೇ ಇದ್ದ ವಯೋವೃದ್ದನ ಕಾಲಿಗೆ ಗಾಯವಾಗಿ ಸರಿಯಾದ ಚಿಕಿತ್ಸೆ ಇಲ್ಲದೆ ಹುಳುಗಳು ಬಿದ್ದು ಒದ್ದಾಡುತ್ತಿದ್ದ. ಹೀಗೆ ಒದ್ದಾಡುತ್ತಿದ್ದ ವಯೋವೃದ್ದರನ್ನ ಸಮಾಜ ಸೇವಕ ಅಬ್ದುಲ್ ಖಾದರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಸ್ಪತ್ರೆಗೆ ದಾಖಲಾದ ವಯೋವೃದ್ದನ್ನ ಇಮಾಮ್ ಸಾಬ್ ಕುರಗುಂದ ೬೦ ವರ್ಷ ವಯಸ್ಸು ಎಂದು ಗುರುತಿಸಲಾಗಿದೆ. ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಅದರೂ ಕಳೆದ ೨೫ ದಿನಗಳಿಂದ ಮನೆ ಬಿಟ್ಟು ಬಂದು ಹಾವೇರಿಯ ಮೇಲಿನಪೇಟಿಯ ರಸ್ತೆ ಬದಿಯಲ್ಲಿ ವಾಸವಾಗಿದ್ದ.
ವಯೋವೃದ್ದನ ಸ್ಥಿತಿ ನೋಡಲಾಗದೆ ಅಬ್ದುಲ್ ಖಾದರ್ ಧಾರವಾಡ, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹಾವೇರಿಯಲ್ಲಿ ವಾಸವಿರುವ ಚಿಕ್ಕಮಗಳಿಗೆ ವಿಷಯ ತಿಳಿಸಿದ್ದಾರೆ. ಮಗಳು ಈಗ ತಂದೆಯ ಜೊತೆಗಿದ್ದು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಒಟ್ನಲ್ಲಿ ರಸ್ತೆ ಬದಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ವಯೋವೃದ್ದನಿಗೆ ಚಿಕಿತ್ಸೆ ಕೊಡಿಸಿದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
_______
More Stories
35 ವರ್ಷಗಳ ನಂತರ ಮನೆಯಲ್ಲಿ ಹೆಣ್ಣುಮಗುವಿನ ಜನನ: ಹೆಲಿಕ್ಯಾಪ್ಟರ್ ನಲ್ಲಿ ಮೊಮ್ಮಗಳನ್ನು ಕರೆತಂದ ಅಜ್ಜ..!
ಜನತಾ ಕರ್ಫ್ಯೂ ಪಾಲನೆ ಮಾಡಿ, ಕೋವಿಡ್ ಚಿಕಿತ್ಸೆಗೆ ನ್ಯೂನ್ಯತೆಯಾಗದಂತೆ ಮುನ್ನೆಚ್ಚರಿಕೆ: ಶಿಗ್ಗಾಂವ-ಸವಣೂರ ಆಸ್ಪತ್ರೆಗೆ ಡಿಸಿ ಭೇಟಿ ಪರಿಶೀಲನೆ..!
ಕೊರೋನಾ ಎರಡನೇಯ ಅಲೆಯ ಭಯ: ಮಾನವೀಯತೆ ಮರೆತ ಜನ, ಅನಾಥವಾಗಿ ಬಿದ್ದ ಬಿಕ್ಷುಕನ ಶವ..!