June 22, 2021

ಬಾರೇ ಬಾರೇ.. ಮಜಾ ಮಾಡೋಣ ಅಂತಾ ಕರಿತಿದ್ದವನ ಮೇಲೆ ಬಿತ್ತು ಲೈಂಗಿಕ ದೌರ್ಜನ್ಯದ ಕೇಸು

ಎಕ್ಸರೇ ಟೆಕ್ನಿಷಿಯನ್ ನಿಂದ ಗುತ್ತಿಗೆ ನೌಕರಳಿಗೆ ಲೈಂಗಿಕ ಕಿರುಕುಳ . ದೂರು ದಾಖಲು.
__________
ಹಾವೇರಿ – ಗುತ್ತಿಗೆ ನೌಕರಳಿಗೆ ಎಕ್ಸ್ ರೇ ಟೆಕ್ನಿಷಿಯನ್‌ನಿಂದ ಲೈಂಗಿಕ‌ ಕಿರುಕುಳ ನೀಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಕಿರುಕುಳ ನೀಡಿದ ವ್ಯಕ್ತಿಯನ್ನ ಆರೋಗ್ಯ ಕೇಂದ್ರದ ಎಕ್ಸ್ ರೇ ಟೆಕ್ನಿಷಿಯನ್ ಕುಬೇರ ಸಾವಂತ ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಗುತ್ತಿಗೆ ನೌಕರಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ೩೩ ವರ್ಷದ ಮಹಿಳೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಸ್ಪತ್ರೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮೈ ಕೈ ಮುಟ್ಟುವುದು, ಮಂಚಕ್ಕೆ ಬಾ ಅಂತಾ ಕರೆದು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸುತ್ತಿದ್ದಾಳೆ.

 

ಕಿರುಕುಳ ನೀಡ್ತಿರೋ ಬಗ್ಗೆ ಮೊಬೈಲ್‌ನಲ್ಲಿ ಧ್ವನಿ ರೆಕಾರ್ಡ್ ಮಾಡಿಕೊಂಡು ಗುತ್ತಿಗೆ ನೌಕರಳು ವೈದ್ಯರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾಳೆ. ಎಕ್ಸ್ ರೇ ಟೆಕ್ನಿಷಿಯನ್ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲಾಗಿದೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಆರೋಪಿಯನ್ನ ಬೇಗ ಪತ್ತೆ ಮಾಡಿ ಕಠಿಣ ಕ್ರಮ‌ ಜರುಗಿಸುವಂತೆ ಒತ್ತಾಯ ಮಾಡಿದ್ದಾರೆ. ಬೇರೆ ಯಾವ ಮಹಿಳೆಯ ಈ ರೀತಿಯ ದೌರ್ಜನ್ಯ ನಡೆಯಬಾರದು. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೆಲಸದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಕಿರುಕುಳ ನೀಡಿದ ವ್ಯಕ್ತಿ ಕಳೆದ ಎರಡುಮೂರು ದಿನಗಳಿಂದ ಕೆಲಸಕ್ಕೆ ಗೈರು ಹಾಜರಾಗಿದ್ದಾನೆ.

_______

Share this News
error: Content is protected !!