ಹಾವೇರಿ: ವಿದ್ಯಾರ್ಜನೆ ಗೈಯುತ್ತಿರುವ ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸರ್ವಾಂಗೀಣ ಪ್ರಗತಿಯತ್ತ ಸಾಗಬೇಕಿದೆ ಎಂದು ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ದೀಪಕ ಕೊಲ್ಲಾಪುರೆ ಹೇಳಿದರು.
ಅವರು ನಗರದ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ 57 ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ವ್ಯಕ್ತಿ ಮಾನಸಿಕ ಮತ್ತು ದೈಹಿಕವಾಗಿ ಸದೃಢಗೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಸತತ ಪ್ರಯತ್ನದಿಂದ ಯಶಸ್ಸಿನ ಗುರಿ ತಲುಪಬೇಕಾದರೆ ಕ್ರೀಡಾ ಸ್ಪೂರ್ತಿ ಅತ್ಯಗತ್ಯವಾಗಿದೆ. ನಿತ್ಯದ ಚಟುವಟಿಕೆಯಲ್ಲಿ ಲವಲವಿಕೆಯಿಂದಿರಲು ಇದು ಸಹಕಾರಿಯಾಗಿದೆ. ಇಂದು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಕ್ರೀಡೆಯು ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ಎಲ್ಲಾ ಕ್ಷೇತ್ರಗಳಿಗೂ ಪೂರಕವಾಗುವಂತಹ ನಿಟ್ಟಿನಲ್ಲಿ ಉದಯೋನ್ಮುಖಿ ಅವಕಾಶಗಳನ್ನು ದೊರಕಿಸುತ್ತಿದೆ.
ಪ್ರಸ್ತುತದಲ್ಲಿ ವಿದ್ಯಾರ್ಥಿಗಳು ವಿವಿಧ ವಿಭಾಗಗಳ ಮೂಲಕ ಅನುಕೂಲಕರವಾದ ರೀತಿಯಲ್ಲಿ ತರಬೇತಿ ಹೊಂದಿ ಉನ್ನತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾದಲ್ಲಿ ಒಳಿತಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ. ಎಮ್. ಎಸ್. ಯರಗೊಪ್ಪ ಮಾತನಾಡಿ ಇಂದು ತಂತ್ರಜ್ಞಾನ ಜಾಲಕ್ಕೆ ಬಿದ್ದು ಭವಿಷ್ಯತ್ತನ್ನು ಮರೆತಿರುವ ವಿದ್ಯಾರ್ಥಿಗಳು ಮೊಬೈಲ್, ಕಂಪ್ಯೂಟರ್, ಐಪಾಡ್ನಂತಹ ವ್ಯವಸ್ಥೆಗಳ ಗೀಳಿಗೆ ಒಳಗಾಗಿ ಕ್ರೀಡಾ ಪ್ರಪಂಚವನ್ನು ಮರೆಯುತ್ತಿದ್ದಾರೆ. ಇದರಿಂದ ಹೊರಬಂದು ದೈಹಿಕ ಮತ್ತು ಮಾನಸಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದರು.
ಪ.ಪೂ. ಪ್ರಾಚಾರ್ಯ ಪ್ರೊ. ಜೆ. ಆರ್. ಶಿಂಧೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕ್ರೀಡಾಕೂಟದ ಉಪಾಧ್ಯಕ್ಷ ಡಾ. ಬಿ. ಎನ್. ವಾಸುದೇವನಾಯ್ಕ ಸ್ವಾಗತಿಸಿದರು. ಪ್ರೊ. ಎಸ್. ಜಿ. ಹುಣಸಿಕಟ್ಟಿಮಠ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಪೂಜಾ ಎಮ್. ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ಆಟೋಟಗಳಲ್ಲಿ ಭಾಗವಹಿಸಲಿಚ್ಛಿಸಿದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
More Stories
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತರುವುದಕ್ಕಾಗಿ ಹನಿಟ್ರ್ಯಾಪ್ ನಡೆದಿರುವ ಸಾಧ್ಯತೆ, ಎಲ್ಲ ಅಯಾಮಗಳಿಂದ ತನಿಖೆ. -ಬಸವರಾಜ್ ಬೊಮ್ಮಾಯಿ
ತವರು ಮನೆಗೆ ಬಂದಿದ್ದ ಅಜ್ಜಿಗೆ, ಯಮನ ರೂಪದಲ್ಲಿ ಕಾಡಿದ ಮನೆಯ ಮೇಲ್ಚಾವಣಿ.
ಕಚ್ಚೆ ಹರುಕರನ್ನೆಲ್ಲ ಗುಡ್ಡೆ ಹಾಕ್ಕೊಂಡು ಮುಖ್ಯಮಂತ್ರಿ ಹೆಂಗೆ ಕೆಲಸ ಮಾಡ್ತಾರೋ ಅರ್ಥ ಆಗ್ತಿಲ್ಲ. -ಕೋಡಿಹಳ್ಳಿ ಚಂದ್ರಶೇಖರ