March 7, 2021

ಪೋಲಿಸ್ ಠಾಣೆಯ ಸಮೀಪದಲ್ಲಿಯೇ, ಕಾರಿನಲ್ಲಿಟ್ಟಿದ್ದ ಎರಡು ಲಕ್ಷ ರೂ ಹಣ ಕಳ್ಳತನ. ಕಿರಾತಕರು ಹಣ ದೋಚಿದ್ದಾದರೂ ಹೇಗೆ..?

ಹಾವೇರಿ- ಅದು ಹಾವೇರಿ ನಗರ ಪೊಲೀಸ್ ಠಾಣೆಯ ಸಮೀಪ. ಸಾರ್ವಜನಿಕರು ಹಾಗೂ ವಾಹನ ಸವಾರರು ಓಡಾಡುವ ರಸ್ತೆ. ಇಂತಹ ಜನನಿಬಿಡ ರಸ್ತೆಯಲ್ಲಿ ಹಾಡುಹಗಲೇ ಕಾರಿನಲ್ಲಿದ್ದ ಎರಡುಲಕ್ಷ ರೂಪಾಯಿ ಹಣ ಕಳ್ಳತನ ಮಾಡಿದ ಘಟನೆ ನಡೆದಿದೆ. ಹಾವೇರಿ‌ ನಗರದ ಲಕ್ಕಿ ಸಲೂನ್ ಎದುರಿಗೆ ಘಟನೆ ನಡೆದಿದೆ. ವಿಪರ್ಯಾಸವೆಂದರೆ ಘಟನೆ ನಡೆದ ಸ್ಥಳದ ಸಮೀಪದಲ್ಲಿಯೇ ನಗರ ಪೋಲಿಸ್ ಠಾಣೆ ಇದೆ.

ಇದನ್ನೂ ಓದಿ  SAVANORU | ಮನೆ ಬೀಗ ಮುರಿದು ಕಳ್ಳರು ದೋಚಿದ್ದು ಏನು!?

ಮಂಜಪ್ಪ ಬಾರ್ಕಿ ಎಂಬುವವರಿಗೆ ಸೇರಿದ ಎರಡು ಲಕ್ಷ ರೂಪಾಯಿ ಹಣವನ್ನ ಬಸವರಾಜ ಸೋಮಸಾಗರ ಎಂಬುವವರ ಕಾರಿನ‌‌ ಡಿಕ್ಕಿಯಲ್ಲಿ ಇಟ್ಟಿದ್ದರು. ಈ ವೇಳೆ ಕಾರಿನಲ್ಲಿ ಯಾರು ಇಲ್ಲದ್ದನ್ನು ಗಮನಿಸಿರುವ ಕಳ್ಳರು ಕಾರಿನ‌ ಹಿಂದಿನ ಬಾಗಿಲಿನ ಗ್ಲಾಸನ್ನು ಒಡೆದು ಡೋರ್ ತೆಗೆದಿದ್ದಾರೆ. ನಂತರ ಕಾರಿನ ಒಳಗಡೆ ನುಗ್ಗಿರುವ ಕಳ್ಳರು, ಡ್ರೈವರ್‌ ಸೀಟಿನ ಹತ್ತಿರ ಇರುವ ಡಿಕ್ಕಿ ತೆರೆದು ಡಿಕ್ಕಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ  ಸಹೋದರನ ಲಗ್ನಪತ್ರಿಕೆ ಕೊಡಲು ಹೋದ ಅಣ್ಣ ಬೈಕ್ ನಿಂದ ಬಿದ್ದು ಸಾವು.

೫೦ ರೂಪಾಯಿ ಮುಖಬೆಲೆಯ ಸುಮಾರು ಎರಡು ಲಕ್ಷ ರೂಪಾಯಿ ಹಣವನ್ನ ಕಳ್ಳತನ ಮಾಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದಲ್ಲಿ ಮೊನ್ನೆ ಮಾಂಗಲ್ಯ ಸರ ಕಳ್ಳತನ ಆಗಿತ್ತು. ಈಗ ಕಾರಿನಲ್ಲಿಟ್ಟಿದ್ದ ಹಣ ಕಳ್ಳತನವಾಗಿರುವ ಪ್ರಕರಣ ನಡೆದಿರುವುದನ್ನು ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!