July 25, 2021

ಚಿತ್ರಕಲಾ ಸ್ಪರ್ಧೆಯಲ್ಲಿ, ರಾಣೇಬೆನ್ನೂರಿನ ಇಬ್ಬರು ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಹಾವೇರಿ- ಸೆಂಟರ್ ಫಾರ್ ಏಜ್ಯುಕೇಶನ್ ಡೆವೆಲಪ್ಮೆಂಟ್ ಮತ್ತು ರಿಸರ್ಚ್, ಪುಣೆ( ಮಹಾರಾಷ್ಟ್ರ) ಇವರು ಆಯೋಜಿಸಿದ್ದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟದ ವಿಭಾಗದಲ್ಲಿ 6 ನೇ ತರಗತಿ ವಿದ್ಯಾರ್ಥಿ ಪಂಕಜ್ ಕಾಗದಗಾರ ಹಾಗೂ 2 ನೇ ತರಗತಿ ವಿದ್ಯಾರ್ಥಿ ಪ್ರಣವ್ ಕಾಗದಗಾರ ಇವರು ಅತ್ಯುನ್ನತ ” ಎ” ಶ್ರೇಣಿ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

 

ಈ ವಿದ್ಯಾರ್ಥಿಗಳು ರಾಣೇಬೆನ್ನೂರ ನಗರದ ಟ್ಯಾಗೋರ್ ಏಜ್ಯುಕೇಶನ್ ಸೊಸೈಟಿಯ, ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.. ಖ್ಯಾತ ಚಿತ್ರಕಾರ, ಲೇಖಕ ನಾಮದೇವ ಕಾಗದಗಾರ ಪುತ್ರರಾದ ಇವರುಗಳು ತಂದೆಯೇ ಮಾರ್ಗದರ್ಶನದಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

 

ಪಂಕಜ್ ಕಾಗದಗಾರ “ನೀರನ್ನು ಉಳಿಸಿ” ಎಂಬ ಜಾಗೃತಿ ವಿಷಯದ ಕುರಿತು ಚಿತ್ರಿಸಿದರೆ, ಪ್ರಣವ್ ಕಾಗದಗಾರ “ಪಕ್ಷಿ ಸಂಕುಲ”ದ ಬಗ್ಗೆ ಚಿತ್ರಿಸಿ ಗಮನಸೆಳೆದಿದ್ದಾರೆ.

Share this News
error: Content is protected !!