ಹಾವೇರಿ – ಹಾವೇರಿ ಜಿಲ್ಲೆಯಲ್ಲಿ ಡಾಂಗೆ ಎಜುಕೇಶನ್ ಸೊಸೈಟಿ (ರಿ) ಸಂಸ್ಥೆಯ ಡಾಂಗೆ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ಕಾಲೇಜಿನಲ್ಲಿ ಬಿ.ಸ್ಸಿ ನರ್ಸಿಂಗ್ ಕೋರ್ಸ್ ಹೊಸದಾಗಿ ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಸಂಜಯ ಡಾಂಗೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಲೇಜಿನಲ್ಲಿ ಬಿ.ಸ್ಸಿ. ನರ್ಸಿಂಗ್ 40 ಸೀಟುಗಳ ಪ್ರವೇಶದೊಂದಿಗೆ 2020-21 ನೇ ಸಾಲಿನಿಂದ ಪ್ರಾರಂಭಿಸಲು ಸರ್ಕಾರ ಅವಕಾಶ ನೀಡಿದೆ.
ನಮ್ಮ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಅನ್ನೋ ಉದ್ದೇಶದಿಂದ ಹಾವೇರಿ ನಗರದಲ್ಲಿ ಪ್ರಥಮವಾಗಿ ಕಾಲೇಜು ಆರಂಭ ಮಾಡಲಾಗಿದೆ.
ಈಗಾಗಲೇ ಡಾ.ಸಂಜಯ ಡಾಂಗೆ ಇನ್ಸ್ಟಿಟ್ಯೂಟ್ ಆಪ್ ಪ್ಯಾರಮೆಡಿಕಲ್ ಸೈನ್ಸಸ್ ಆರಂಭಿಸಿದೆ. ಅದರ ಜೊತೆಗೆ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ, ಡಿಪ್ಲೊಮಾ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ , ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಮತ್ತು ಡಿಪ್ಲೊಮಾ ಅನಸ್ತೇಶಿಯಾ ಟೆಕ್ನಾಲಜಿ, ಡಿಪ್ಲೊಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ, ಮತ್ತು ಡಿಪ್ಲೊಮಾ ಇನ್ ಆಪ್ತಾಲ್ಮಿಕ ಟೆಕ್ನಾಲಜಿ ಕೋರ್ಸ್ ಆರಂಭಿಸಲಾಗಿದೆ. ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ಇದೆ. ಈ ಕೊರ್ಸ್ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಲಭ್ಯವಾಗುತ್ತದೆ ಎಂದರು.
More Stories
ಜನತಾ ಕರ್ಫ್ಯೂ ಪಾಲನೆ ಮಾಡಿ, ಕೋವಿಡ್ ಚಿಕಿತ್ಸೆಗೆ ನ್ಯೂನ್ಯತೆಯಾಗದಂತೆ ಮುನ್ನೆಚ್ಚರಿಕೆ: ಶಿಗ್ಗಾಂವ-ಸವಣೂರ ಆಸ್ಪತ್ರೆಗೆ ಡಿಸಿ ಭೇಟಿ ಪರಿಶೀಲನೆ..!
ಕೊರೋನಾ ಎರಡನೇಯ ಅಲೆಯ ಭಯ: ಮಾನವೀಯತೆ ಮರೆತ ಜನ, ಅನಾಥವಾಗಿ ಬಿದ್ದ ಬಿಕ್ಷುಕನ ಶವ..!
ಕೊರೋನಾ ನಿಯಮ ಬ್ರೇಕ್: 35 ಮಂದಿ ರೈತರ ಮೇಲೆ ಎಫ್.ಐ.ಆರ್.ದಾಖಲು..!