July 25, 2021

ಅಯ್ಯೊ ‌ಪಾಪ, ತಿಮ್ಮಪ್ಪನ ದರ್ಶನ‌ ಪಡೆದು ವಾಪಸ್ ಬರುತ್ತಿದ್ದಾಗ ಅಪಘಾತ. ವಾಹನದೊಳಗೆ ಸಿಲುಕಿ ಒದ್ದಾಡಿದ ಪ್ರಯಾಣಿಕ.

ಹಾವೇರಿ – ಅವರೆಲ್ಲರೂ ತಿರುಪತಿ ತಿಮ್ಮಪ್ಪ ನ್ನ ದರ್ಶನ ಪಡೆಯಲು ಖುಷಿ-ಖುಷಿಯಿಂದ ಹೋಗಿದ್ದರು. ಅದರಂತೆ ದರ್ಶನ ಪಡೆದು ವಾಪಸ್ ಆಗುತ್ತಿದ್ದ ವೇಳೆ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರಿಗೆ ಗಂಭೀರ ಗಾಯಗೊಂಡು, ಓರ್ವ ಕ್ರೂಸರ್ ನಲ್ಲಿ ಸಿಕ್ಕು ಪರದಾಡಿದ ಘಟನೆ ಹಾವೇರಿ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಘಟನೆ ನಡೆದಿದೆ.

ಕ್ರೂಸರ್ ವಾಹನದಲ್ಲಿ ಸಿಕ್ಕ ಪಾರದಾಡುತ್ತಿದ್ದ ವ್ಯಕ್ತಿಯನ್ನ ಸತೀಶ ಕಾಸರಕರ 43 ವರ್ಷ ವಯಸ್ಸು ಎಂದು ಗುರುತಿಸಲಾಗಿದೆ. ಕ್ರೂಸರ್ ನಲ್ಲಿ ಸಿಲುಕಿರುವ ಸತೀಶನನ್ನ ಹೊರತೆಗೆಯಲು 108 ವಾಹನದ ತೌಫೀಕ್ ಹಾಗೂ ಸ್ಟಾಪ್ ನರ್ಸ್ ಶಂಕರ್ ಲಮಾಣಿ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಮೂರು ಗಂಟೆಕಾಲ ಸತತ ಪ್ರಯತ್ನದಿಂದ ಹೊರಗೆ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಜ್ಜುಗುಜ್ಜಾಗಿರುವ ವಾಹನದಲ್ಲಿ ಕಾಲು ಸಿಲುಕಿದ್ದರಿಂದ ಸತೀಶ ನ ಹೊರ ತೆಗೆಯಲು ಪರದಾಡಲಾಯಿತು. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಾರಾಷ್ಟ್ರ ಮೂಲದ ಕ್ರೂಸರ್ ವಾಹನ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಊರಿಗೆ ತೆರಳುತ್ತಿದ್ದ ಈ ವೇಳೆ ದುರ್ಘಟ‌ನೆ ನಡೆದಿದೆ.
ಹಾವೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share this News
error: Content is protected !!