July 25, 2021

ಆದರ್ಶ ವ್ಯಕ್ತಿಗಳ ಬದುಕು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ – ರವಿಕುಮಾರ ಪೂಜಾರ್

ಹಾವೇರಿ- ಈ ದೇಶ ಕಂಡ ಮಹಾನ್ ಉದ್ದಿಮೆದಾರರಾದ ರತನ್ ಟಾಟಾ, ಸುಧಾಮೂರ್ತಿ, ನಾರಾಯಣಮೂರ್ತಿ, ಮುಖೇಶ್ ಅಂಬಾನಿ, ಅಜೀಮ್ ಪ್ರೇಮ್‍ಜಿಯಂತಹ ಮೊದಲಾದ ಆದರ್ಶ ವ್ಯಕ್ತಿಗಳ ಬದುಕು ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕಿದೆ ಎಂದು ವಿವೇಕಾನಂದ ಪಿ. ಯು. ಕಾಲೇಜಿನ ಪ್ರಾಂಶುಪಾಲ ರವಿಕುಮಾರ ಪೂಜಾರ್ ಹೇಳಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಬಿಸಿಎ ಮಹಾವಿದ್ಯಾಲಯದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಧನೆ ಮಾಡಲು ಸತತ ಪ್ರಯತ್ನ ಮತ್ತು ನಿರಂತರ ಪರಿಶ್ರಮ ಅಗತ್ಯವಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಶಿಕ್ಷಣ ಮಟ್ಟ ಮತ್ತು ಅದರ ಮಹತ್ವವನ್ನು ಅರ್ಥೈಸಿಕೊಂಡರೆ ಮುಂದಿನ ಭವಿಷ್ಯ ಸುಗಮತೆಯಲ್ಲಿ ಸದೃಢಗೊಳ್ಳಲಿದೆ ಎಂದರು.

ವೇದಾಂತ ಕಾಲೇಜಿನ ಪ್ರಾಚಾರ್ಯ ಕೆ. ಜಿ. ಪಾಟೀಲ ಮಾತನಾಡಿ ತಾಂತ್ರಿಕ ಶಿಕ್ಷಣ ಮಹತ್ವ ಇಂದು ಎಲ್ಲೆಡೆ ಹೆಚ್ಚುತ್ತಿದೆ. ಎಲ್ಲ ವ್ಯವಹಾರಗಳು ಯಾಂತ್ರಿಕ ವ್ಯವಸ್ಥೆಯಲ್ಲಿ ಮುನ್ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆಯುವ ಅಗತ್ಯವಿದೆ ಎಂದರು.

ಬಿ.ಸಿ.ಎ ಪ್ರಾಚಾರ್ಯ ವೆಂಕಟೇಶ್ ಕಲಾಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ. ಪೂ. ಪ್ರಾಚಾರ್ಯ ಜೆ. ಆರ್. ಶಿಂಧೆ ಉಪಸ್ಥಿತರಿದ್ದರು. ಪಲ್ಲವಿ ಪ್ರಾರ್ಥಿಸಿದರು. ಪ್ರೊ. ಪ್ರದೀಪ್ ಕುಲಕರ್ಣಿ ಸ್ವಾಗತಿಸಿದರು. ಪ್ರಾಣೇಶ್ ಮತ್ತು ವಿಜಯಲಕ್ಷ್ಮಿ ಪರಿಚಯಿಸಿದರು. ವಿನಾಯಕ್ ಮಡಿವಾಳರ ವಂದಿಸಿದರು.

Share this News
error: Content is protected !!