July 25, 2021

ಮಾರಿ,ದುರ್ಗಾ ಮಾತೆಯರ ತಾಳಿಯನ್ನೆ ಬಿಡಲಿಲ್ಲ…

ಹಾನಗಲ್ – ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಮೂಡೂರ ಗ್ರಾಮದಲ್ಲಿ ಎರಡು ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಘಟನೆ ನಡೆದಿದೆ.

ಗ್ರಾಮದ ಮರಿಯಮ್ಮದೇವಿ ದೇವಸ್ಥಾನ ಹಾಗೂ ದುರ್ಗಾದೇವಿ ದೇವಸ್ಥಾನದಲ್ಲಿ ದೇವಿ ಆಭರಣ ಎರಡು ಗ್ರಾಂ ಚಿನ್ನದ ೨ ಸಣ್ಣ ತಾಳೆ ಹಾಗೂ ಒಂದು ಗ್ರಾಂ ಮೂಗುತಿ ಕಳ್ಳತನ ಮಾಡಿದ್ದಾರೆ.

ಇನ್ನೂ ದುರ್ಗಾದೇವಿ ದೇವಾಲಯದಲ್ಲಿ ೨ ಗ್ರಾಂ ತೂಲಕದ ತಾಳಿ ಹಾಗೂ ಒಂದು ಗ್ರಾಮ ತೂಕದ ಮೂಗುತಿ ಕಳ್ಳತನ ಮಾಡಿದ್ದಾರೆ. ಎರಡು ದೇವಸ್ಥಾನದ ಬೀಗ ಮುರಿದು ಕಳ್ಳತನ ‌ಮಾಡಿದ್ದಾರೆ. ಒಟ್ಟು 18,000 ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ.

Share this News
error: Content is protected !!