July 25, 2021

SHIGGAON| ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯಿಸಿ, 18ನೇಯ ದಿನಕ್ಕೆ ಕಾಲಿಟ್ಟ ಧರಣಿ

ಶಿಗ್ಗಾಂವಿ – ಡಾ.ಬಿ.ಆರ್.ಅಂಬೇಡ್ಕರ್ ರವರ ಮೂರ್ತಿಯನ್ನು ಶಿಗ್ಗಾಂವಿ ಪಟ್ಟಣದ ಹಳೆ ಬಸ್ ನಿಲ್ದಾಣದ ಜನತಾ ಬಜಾರ್ ಮುಂದೆ ಪ್ರತಿಷ್ಠಾನ ಮಾಡುವಂತೆ ಒತ್ತಾಯಿಸಿ ಹನುಮಂತ ಬಂಡಿವಡ್ಡರ್ ಹಾಗೂ ಸಮಾಜ ಸೇವಕಿ ಬಾಬಕ್ಕಾ ಬಳ್ಳಾರಿ ಹೋರಾಟ ನಡೆಸಿದ್ದಾರೆ.

ಶಿಗ್ಗಾಂವಿ ಪಟ್ಟಣದ ಜನತಾ ಬಜಾರ ಮುಂದೆ ಕಳೆದ 18 ದಿನಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಬಹುದಿನಗಳಿಂದ ಈ ಹೋರಾಟ ನಡೆಸಲಾಗುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾನ ಮಾಡಲಾಗಿದೆ.

­

ಶಿಗ್ಗಾಂವಿ ಪಟ್ಟಣದಲ್ಲಿಯೂ ಕೂಡ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿಯವರು ಜನತಾ ಬಜಾರ್ ಮುಂದೆ ಡಾ. ಬಿ.ಆರ್.ಅಂಬೇಡ್ಕರ್ ರವರ‌ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Share this News
error: Content is protected !!