July 25, 2021

ಬಿಜೆಪಿ ಸಚಿವರ ಮೇಲೆ ಮುಸ್ಲಿಂ ಅಭಿಮಾನಿಯ ಅಭಿಮಾನ. ಅಭಿಮಾನಿ‌ ಮಾಡಿದ್ದಾದರೂ ಏನು..!?.

ಹರಿಕೆ ಹೊತ್ತಿದ್ದ ಅಭಿಮಾನಿ, ಅಭಿಮಾನಿಯಿಂದ ಕೃಷಿ ಸಚಿವರಿಗೆ ಸಕ್ಕರೆ ತುಲಾಭಾರ.
______
ಹಿರೇಕೆರೂರು – ಕೃಷಿ ಸಚಿವ ಬಿ.ಸಿ.ಪಾಟೀಲ ಅಭಿಮಾನಿಯೊಬ್ಬ ಸಚಿವ ಬಿಸಿ ಪಾಟೀಲ ಗೆ ಸಕ್ಕರೆ ತುಲಾಭಾರ ಮಾಡುವ ಮೂಲಕ ಹರಕೆ ತೀರಿಸಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಹಂಸಭಾವಿಯಲ್ಲಿ ನಡೆದಿದೆ.

ಹಂಸಭಾವಿ ಗ್ರಾಮದ ಅಭಿಮಾನಿ ಮುಸ್ತಫ್ ಅಬ್ದುಲಜೀ ಪ್ಯಾಟಿ ಅನ್ನೋ ತಮ್ಮ ಮನೆಯ ಮುಂದೆ ಸಕ್ಕರೆ ತುಲಾಭಾರ ನೆರೆವೇರಿಸಿದರು.‌ ಮೊದಲು ಭಾರಿ ಶಾಸಕರಾಗಿದ್ದರು, ಎರಡನೇ ಭಾರಿ ಆಯ್ಕೆ ಆದ ಇತಿಹಾಸ ಇರಲಿಲ್ಲ.

ಎರಡನೇ ಭಾರಿ ಶಾಸಕರಾಗಿ ಆಯ್ಕೆ ಅದರೆ ಸಕ್ಕರೆ ತುಲಾಭಾರ ಮಾಡುತ್ತೆನೆ ಅಂತಾ ಬೇಡಿಕೊಂಡಿದ್ದೆ. ಅಲ್ಲದೆ ನಮ್ಮ ತಾಲ್ಲೂಕಿನಲ್ಲಿ ಯಾರು ಸಚಿವರಾಗಿ ಆಯ್ಕೆ ಆಗಿರಲಿಲ್ಲ. ಸಚಿವರಾಗಿ ಆಯ್ಕೆ ಆದರೆ ಸಕ್ಕರೆ ತುಲಾಭಾರ ಮಾಡುತ್ತೆನೆ ಅಂತಾ ಬೇಡಿಕೊಂಡಿದ್ದೆ. ಈಗ ಸಚಿವರಾಗಿದ್ದಾರೆ, ಇವತ್ತು ಸಚಿವರಾಗಿದ್ದಾರೆ. ಒಂದು ಕ್ವೀಂಟಲ್ ಐದು ಕೆಜಿ ಸಕ್ಕರೆ ತೂಕ ಇಟ್ಟು ತುಲಾಭಾರ ಮಾಡಿದ್ದೇವೆ ತುಂಬಾ ಖುಷಿಯಾಗಿದೆ ಎಂದರು.

ಬಿ.ಸಿ.ಪಾಟೀಲ ರಿಗೆ ಪೇಟಾ ಹಾಕಿ , ಯಾಲಕ್ಕಿ ಹಾರ ಹಾಕಿ , ದೊಡ್ಡ ತಕ್ಕಡಿಯಲ್ಲಿ ತುಲಾಭಾರ ಕಾರ್ಯಕ್ರಮವನ್ನ ಕುಟುಂಬ ಸದಸ್ಯರು   ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.

 

ಉಸಮನ್ ದರ್ಗಾಕ್ಕೆ ಬೇಡಿಕೊಂಡಿದ್ದೆ, ಸಕ್ಕರೆಯನ್ನ ಧಾರ್ಮಿಕ ಶಾಲೆಗೆ ನೀಡುತ್ತೆನೆ ಎಂದರು. ನಮ್ಮ ಅಭಿಮಾನಿ ಬೇಡಿಕೆಕೊಂಡಿದ್ದರು ಹರಿಕೆ ತೀರಿಸಿದ್ದೇನೆ. ಅವರ ಅಭಿಮಾನಕ್ಕೆ ಧನ್ಯವಾದ ತಿಳಿಸಿದರು. ಈ ತುಲಾಭಾರ ಕಾರ್ಯಕ್ರಮ ಹಂಸಭಾವಿ ಗ್ರಾಮಸ್ಥರು ಹಾಗೂ ಪ್ಯಾಟಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

Share this News
error: Content is protected !!