July 25, 2021

ಅಂಧಮಕ್ಕಳ ಶಾಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ 79ನೇಯ ಹುಟ್ಟುಹಬ್ಬ ಆಚರಣೆ.

ಅಂಧಮಕ್ಕಳ ಶಾಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹುಟ್ಟುಹಬ್ಬ ಆಚರಿಸಿದ ಓಲೇಕಾರ
____
ಹಾವೇರಿ – ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ 79 ನೇ ಹುಟ್ಟು ಹಬ್ಬವನ್ನ ಹಾವೇರಿ ಶಾಸಕ ನೆಹರು ಓಲೇಕಾರ ಹಾಗೂ ಅನುಸೂಚಿತ ಜಾತಿ ಬುಡಕಟ್ಟು ಆಯೋಗದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಣೆ ಮಾಡಿದರು.

ನಗರದ ಜ್ಞಾನಜ್ಯೋತಿ ಅಂಧಮಕ್ಕಳ ಶಾಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ 79 ನೇ ವರ್ಷದ ಹುಟ್ಟು ಹಬ್ಬದ ಕೇಕ್ ಕತ್ತರಿಸಿ ಮಕ್ಕಳಿಗೆ ಕೇಕ್ ತಿನ್ನಿಸಿದರು.

ಜ್ಞಾನಜ್ಯೋತಿ ಅಂಧಮಕ್ಕಳ ಶಾಲೆಯ ಅಂಧ ಮಕ್ಕಳಿಗೆ ಬ್ಲಾಕೇಟ್ ನೀಡಿದರು. ಈ ರಾಜ್ಯದ ಬಡವರ ಬಂಧು, ಸದಾ ರಾಜ್ಯದ ಅಭಿವೃದ್ಧಿಪರ ಯೋಜನೆ ನೀಡುತ್ತಿರುವ ನಾಯಕರಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟು ಹಬ್ಬದ ಶುಭಾಶಯಗಳು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯರಾದಂತ ಅಖಿಲ ಕರ್ನಾಟಕ ವಿಜಯೇಂದ್ರ ಯಡಿಯೂರಪ್ಪ ಯುವಸೇನೆಯ(ರಿ) ರಾಜ್ಯ ಉಪಾಧ್ಯಕ್ಷರಾದ ಪರಶುರಾಮ್ ಹರ್ಲಾಪುರ್, ಹಿರಿಯರಾದ ನಂಜುಂಡೇಶ್ ಕಳ್ಳೆರ,ರಾಜು ಹೊಸಕೇರಿ, ಶಿವಕುಮಾರ್ ಸಂಗೂರ್, ದೇವರಾಜ್ ಓಲೇಕಾರ್, ಚನ್ನಮ್ಮ ಬ್ಯಾಡಗಿ ಹಾಗೂ ಸಹೋದರರಾದ ಶಂಭು ಚಕ್ಕಡಿ ,ಹಾಗೂ ವಿವೇಕಾನಂದ ಇಂಗಳಗಿ ಅವರು ಉಪಸ್ಥಿತರಿದ್ದರು

Share this News
error: Content is protected !!