July 25, 2021

ಸದ್ದಲೇ….! ಆಡೂರಿನಲ್ಲಿ ಮಾಲತೇಶ ದೇವರ ಕಾರ್ಣೀಕ ಏನಾಯ್ತು ಗೊತ್ತಾ..!?.

ಹಾನಗಲ್ – ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ಮಾಲತೇಶ ದೇವರ ಕಾರ್ಣಿಕೋತ್ಸವ ನಡೆಯಿತು. ಪ್ರತಿವರ್ಷ ಭಾರತ ಹುಣ್ಣಿಮೆ ದಿನ ನಡೆಯೋ ಕಾರ್ಣಿಕವನ್ನ ವರ್ಷದ ಭವಿಷ್ಯವಾಣಿ ಅಂತಲೆ ನಂಬಲಾಗುತ್ತದೆ.

ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಬರೋ ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕ ನುಡಿಯುತ್ತಾನೆ. ಇವತ್ತು ಗೊರವಯ್ಯ ಹನುಮಗೌಡ ಗೋರೇಗೌಡ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಈಡಿ ವಾತಾವರಣ ಶಾಂತವಾಯ್ತು.

ಆಗ ಬಿಲ್ಲನೇರಿದ ಗೊರವಯ್ಯ ಸ್ವಾಮೀ “ಮಳೆ, ಬೆಳೆ ಸಂಪಾತಲೇ ಪರಾಕ್” ಅಂದವನೆ ಗೊರವಯ್ಯ ಬಿಲ್ಲಿನಿಂದ ಕೆಳಕ್ಕೆ ಬಿದ್ದನು. ಗೊರವಯ್ಯನ ಕಾರ್ಣಿಕವಾಣಿ ಕೇಳಿದ ಸುತ್ತಮುತ್ತಲಿನ ಗ್ರಾಮಗಳ ಜನರು ಮನೆಯತ್ತ ಹೆಜ್ಜೆ ಹಾಕಿದ್ರು. ಪ್ರಸ್ತಕ ವರ್ಷ ಮಳೆ ಮತ್ತು ಬೆಳೆ ಚೆನ್ನಾಗಿ ಆಗುತ್ತೆ ಅನ್ನೋ ವಿಶ್ಲೇಷಣೆ ಮಾಡಲಾಯಿತು.

Share this News
error: Content is protected !!